ನನ್ನನ್ನು ಸಿಕ್ಕಿ ಹಾಕಿಸಲು ಸರ್ಕಾರ ಪ್ರಯತ್ನ: ಹಳೇ ಕೇಸ್ ಗೆ ಜೀವ ಕೊಡುತ್ತಿದ್ದಾರೆ- ಕೇಂದ್ರ ಸಚಿವ ಹೆಚ್ ಡಿಕೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಸೆಪ್ಟಂಬರ್,20,2024 (www.justkannada.in): ನನ್ನನ್ನು ಯಾವುದಾದರೂ ಕೇಸ್ ನಲ್ಲಿ  ಸಿಕ್ಕಿ ಹಾಕಿಸಲು ಸರ್ಕಾರ 3 ತಿಂಗಳಿನಿಂದ ಪ್ರಯತ್ನ ಮಾಡುತ್ತಿದೆ.  ಯಾವ ಕೇಸ್ ಗಳು ಸಿಗದ ಹಿನ್ನಲೆ ಹಳೇ ಕೇಸ್ ಗೆ ಜೀವ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ನಿನ್ನೆ ಸಚಿವರ ಪತ್ರಿಕಾಗೋಷ್ಠಿ ಕಾಂಗ್ರೆಸ್ ಟೂಲ್ ಕಿಟ್. ಯಾರೋ ಅವರಿಗೆ ಸ್ಕ್ರಿಪ್ಟ್ ಕೂಡ ಸರಿಯಾಗಿ ಬರೆದು ಕೊಟ್ಟಿಲ್ಲ. ಅದರಲ್ಲಿ ಅವರೇ ಸಿಕ್ಕಿ ಬೀಳುತ್ತಾರೆ ಎಂದು ಲೇವಡಿ ಮಾಡಿದರು.

ಕೃಷ್ಣೇಭೈರೇಗೌಡ ನೇತೃತ್ವದಲ್ಲಿ ನಿನ್ನೆ ಸುದ್ದಿಗೋಷ್ಠಿ ಮಾಡಿದ್ದಾರೆ. ನಾನು ಎಲ್ಲೂ ಕದ್ದು ಹೋಗಲ್ಲ ಸುಳ್ಳು ಹೇಳಿಕೊಂಡು ಬೇರೆಯವರ ನೆರವನ್ನು ತೆಗೆದುಕೊಳ್ಳುವುದಿಲ್ಲ ನನಗೂ ಆರೋಪ ಮಾಡಿರುವ ಪ್ರಾಪರ್ಟಿ ಸಂಬಂಧವಿದೆ. ಇಲ್ಲ ಅಂತ ನಾನು ಹೇಳಲ್ಲ. ನನ್ನ ಹೆಂಡತಿಯ ತಾಯಿಯ ಪ್ರಾಪರ್ಟಿ ಅದು. ಕೃಷ್ಣಭೈರೇಗೌಡ ವಿದೇಶದಲ್ಲಿ ಓದಿ ಬಂದಿದ್ದಾರೆ ನಾನು ಹರದನಹಳ್ಳಿ ಎಂಬ ಹಳ್ಳಿಯಲ್ಲಿ ಓದಿದವನು ಎಂದುಸಚಿವ ಕೃಷ್ಣೆಭೈರೇಗೌಡಗೆ ಟಾಂಗ್ ಕೊಟ್ಟರು.

ಯಾರೋ ಬರೆದುಕೊಟ್ಟಿದ್ದು ಇಟ್ಟುಕೊಂಡು ನಿನ್ನೆ ಪ್ರೆಸ್ ಮೀಟ್ ಮಾಡಿದ್ದಾರೆ. 3 ತಿಂಗಳಿನಿಂದ ಒದ್ದಾಡುತ್ತಿದ್ದಾರೆ. 2015 ರಲ್ಲಿ ಕೇಸ್ ಹಾಕಿದ್ದಾರೆ. ಆವಾಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರು. ಆದರೆ ತನಿಖೆ ಮಾಡದೆ ಏನು ಮಾಡುತ್ತಿದ್ದರು? ನಾನು ಇವರ ಭ್ರಷ್ಟಚಾರ ಬಗ್ಗೆ ಮಾತನಾಡಲು ಶುರು ಮಾಡಿದೆ. ಹೀಗಾಗಿ ನನ್ನನ್ನು ಸಿಕ್ಕಿಸಲು ಏನೇನೋ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ಕೇಸ್ ಗೂ ಸಿದ್ದರಾಮಯ್ಯ ಕೇಸ್ ಗೂ ವ್ಯತ್ಯಾಸವಿದೆ. ನಾನು ಕೆಟ್ಟ ಕೆಲಸ ಮಾಡಲ್ಲ. ಮಿಸ್ಟರ್ ಕೃಷ್ಣೆಭೈರೇಗೌಡ ನನ್ನ ಅಲುಗಾಡಿಸಲು ಸಾಧ್ಯವಿಲ್ಲ. ಕಂದಾಯ ಇಲಾಖೆಯಲ್ಲಿ ಏನೇನ್ ಆಗ್ತಿದೆ ಗೊತ್ತು. ಮುಂದಿನ ದಿನಗಳಲ್ಲಿ ಅದು ಹೊರಗಡೆ ಬರುತ್ತೆ ಎಂದು ಕಿಡಿಕಾರಿದರು.

ನಾನು ತಪ್ಪು ಮಾಡಿ ಕೈಕಟ್ಟಿ ನಿಲ್ಲುವ ಸಮಯ ಬಂದರೆ 5 ಸೆಕೆಂಡ್ ಕೂಡ ರಾಜಕೀಯದಲ್ಲಿ ಇರಲ್ಲ

ನಾನು ನನ್ನ ರಕ್ಷಣೆ ಮಾಡಿ ಎಂದು ಯಾರ ಮುಂದೆಯೂ ಗೋಗರಿಯುದಿಲ್ಲ. ಆ ರೀತಿಯ ತಪ್ಪು ಕೆಲಸವನ್ನು ನಾನು ಮಾಡಿಲ್ಲ. ಈ ಪ್ರಕರಣದಲ್ಲಿ ಡಿನೋಟಿಫಿಕೇಷನ್ ಆಗಿದೆ. ಆದರೆ ನಾನು ಮಾಡಿಲ್ಲ. ಆ ಜಾಮೀನು ತೆಗೆದುಕೊಂಡಿದ್ದು ನನ್ನ ಪತ್ನಿಯ ಕಡೆಯವರದು. ಒಂದು ವೇಳೆ ನಾನು ತಪ್ಪು ಮಾಡಿ ಕೈಕಟ್ಟಿ ನಿಲ್ಲುವ ಸಮಯ ಬಂದರೆ 5 ಸೆಕೆಂಡ್ ಕೂಡ ರಾಜಕೀಯದಲ್ಲಿ ಇರಲ್ಲ ಎಂದು ಹೆಚ್.ಡಿಕೆ ಹೇಳಿದರು.

2015 ರಲ್ಲಿ ಕೇಸ್ ಆಗಿತ್ತು ತನಿಖೆ ಮಾಡಿ ಬಿ ರಿಪೋರ್ಟ್ ಆಗಿದೆ. ಈಗ ಆ ಕೇಸ್ ಗೆ ಜೀವ ಕೊಡಲು ನಿಂತಿದ್ದಾರೆ. ನಾನು ಯಾರಿಗೂ ಟೋಪಿ ಹಾಕಿ ಜಮೀನು ಪಡೆದಿಲ್ಲ. ನಾನೇ ಆ ಫೈಲ್ ಅನ್ನು ಸಿಎಂ ಆಗಿದ್ದಾಗ ರಿಜೆಕ್ಟ್ ಮಾಡಿದ್ದೇನೆ. ನನ್ನ ಹಾಗೂ ಯಡಿಯೂರಪ್ಪ ರಾಜಕೀಯ ಸಂಘರ್ಷ ಹೇಗಿತ್ತು ಎಲ್ಲರಿಗೂ ಗೊತ್ತಿದೆ. ಈ ಕಾಲದಲ್ಲಿ ಅವರು ನನಗೆ ಯಾಕೆ ಸಹಾಯ ಮಾಡ್ತಾರೆ. ನನ್ನ ಸಿಕ್ಕಿಸಲು ಈ ಸರ್ಕಾರ 3 ತಿಂಗಳಿನಿಂದ ಪ್ರಯತ್ನ ಮಾಡ್ತಿದೆ. ಯಾವ ಕೇಸ್ ಗಳು ಸಿಗದ ಹಿನ್ನಲೆ ಹಳೇ ಕೇಸ್ ಗೆ ಜೀವ ಕೊಡ್ತಿದ್ದಾರೆ ಎಂದರು.

ಸತ್ತವರಿಂದ ಹೆಬ್ಬೆಟ್ಟು ಹಾಕಿಸಿ ಜಮೀನು ಮಾಡಿದ್ದು ಯಾರು? ಡಿಕೆಶಿ ವಿರುದ್ದ ಗುಡುಗು

ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದವೂ ಗುಡುಗಿದ ಹೆಚ್.ಡಿಕೆ, ಸತ್ತವರಿಂದ ಹೆಬ್ಬೆಟ್ಟು ಹಾಕಿಸಿ ಜಮೀನು ಮಾಡಿದ್ದು ಯಾರು? ಡಿಕೆಶಿಗೆ ಅದೆಲ್ಲವೂ ಚೆನ್ನಾಗಿ ಗೊತ್ತಿದೆ. ಆದರೆ ಅದು ಡಿಕೆ ಸುರೇಶ್ ಗೆ ಅದೆಲ್ಲ ಮರೆತು ಹೋಯ್ತ? ನನಗೆ ಅಂತ ಯಾವ ವ್ಯವಹಾರಗಳು ಗೊತ್ತಿಲ್ಲ. ಈಗ ಕೆಲವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಹುಟ್ಟುತ್ತಿದೆ. ಮೈಸೂರಿನಲ್ಲಿ ದೇವೇಗೌಡರ ಫೋಟೋಗೆ ಚಪ್ಪಲಿ ಹಾರ ಹಾಕಿಸಿದ್ದು ಯಾರು ಆಗ ಒಕ್ಕಲಿಗರ ಸ್ವಾಭಿಮಾನ ಎಲ್ಲಿ ಹೋಗಿತ್ತು. ನಮ್ಮ ಸಮಾಜದ ಸ್ವಾಮೀಜಿಗೆ ನಾನು ಸಾಫ್ಟ್ ಆಗಿರಲು ಹೇಳಿದ್ದೇನೆ ಎಂದು ಆರೋಪ ಮಾಡ್ತಿದ್ದಾರೆ. ನಾನ್ಯಾಕೆ ಇಂತವನ್ನು ಮಾಡಲಿ ಹೇಳಿ ಎಂದು ವಾಗ್ದಾಳಿ ನಡೆಸಿದರು.

ಮುನಿರತ್ನ ಪ್ರಕರಣದಲ್ಲಿ ಎಸ್.ಐ.ಟಿ ರಚನೆ ಪ್ರಸ್ತಾಪ ವಿಚಾರ, ಎಸ್.ಐ.ಟಿ ಎನ್ನುವುದು ಸಿದ್ದರಾಮಯ್ಯ ಶಿವಕುಮಾರ್ ತನಿಖೆ ಸಂಸ್ಥೆ ಇದ್ದಂತೆ. ಎಸ್.ಐ.ಟಿ ಮಾಡುವುದು ತನಿಖೆ ಅಲ್ಲ ಇವರ ಗುಲಾಮಗಿರಿ ಎಂದು ಹೆಚ್.ಡಿಕೆ ಟೀಕಿಸಿದರು.

Key words: Government, old case, Union Minister, HDK

Font Awesome Icons

Leave a Reply

Your email address will not be published. Required fields are marked *