ನಮ್ಮನ್ನು ಜೀವಂತ ಸುಡಲು ಯತ್ನ: ಮಹಿಳಾ ಪೊಲೀಸ್ ಪೇದೆ ನೋವಿನ ಮಾತು

ಹಲ್ದ್ವಾನಿ: ಹೈಕೋರ್ಟ್ ನಿರ್ದೇಶನದಂತೆ ಅಕ್ರಮ ಮದರಸಾ ತೆರವು ಕಾರ್ಯಾಚರಣೆಯನ್ನು ಉತ್ತರಖಂಡದ ನೈನಿತಾಲ್ ಮುನ್ಸಿಪಲ್ ಕಾರ್ಪೋರೇಶನ್ ಆರಂಭಿಸಿತ್ತು. ಆದರೆ ಈ ಕಾರ್ಯಾಚರಣೆಯಿಂದ ಭುಗಿಲೆದ್ದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳು ಬೆಂಕಿಗೆ ಆಹುತಿಯಾಗಿದೆ. ಪೊಲೀಸ್ ಠಾಣೆ ಪುಡಿ ಪುಡಿಯಾಗಿದೆ. ಈ ಹಿಂಸಾಚಾರದಲ್ಲಿ ಬದುಕುಳಿದ ಮಹಿಳಾ ಪೊಲೀಸ್ ಪೇದೆ ಭೀಕರ ಘಟನೆಯನ್ನು ವಿವರಿಸಿದ್ದಾರೆ. ಪೊಲೀಸರನ್ನು ಜೀವಂತ ಸುಡಲು ಮದರಸಾ ಸಿಬ್ಬಂದಿಗಳು, ಮುಸ್ಲಿಮರು ಪೂರ್ವನಿಯೋಜಿತ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ನಾವು ಬದುಕಿ ಉಳಿದಿದ್ದೇ ಪವಾಡ ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.

ಅಕ್ರಮ ಮದರಸಾ ತೆರವು ಕಾರ್ಯಾಚರಣೆಗೆ ಹಲವು ದಿನಗಳ ಮೊದಲೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ತೆರವು ಮಾಡಲು ಅಧಿಕಾರಿಗಳು, ಪೊಲೀಸರು ಆಗಮಿಸುತ್ತಾರೆ ಅನ್ನೋ ಮಾಹಿತಿ ಮುಸ್ಲಿಮ್ ಗಲಭೆಕೋರರಿಗೆ ಸ್ಪಷ್ಟವಾಗಿತ್ತು. ಹೀಗಾಗಿ ಕಾರ್ಯಾಚರಣೆಗೆ ಬಂದ ಪೊಲೀಸರು, ಅಧಿಕಾರಿಗಳನ್ನು ಜೀವಂತ ಸುಡಲು ಪೆಟ್ರೋಲ್ ಬಾಂಬ್ ಹಾಗೂ ಕಲ್ಲುಗಳನ್ನು ಶೇಖರಿಸಿಡಲಾಗಿತ್ತು ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿರುವಾಗಲೇ ನಮ್ಮ ಮೇಲೆ ಕಲ್ಲುಗಳು ತೂರಿಬಂತು. ಅಧಿಕಾರಿಗಳು, ಪೊಲೀಸರು ಸೇರಿ 50 ಮಂದಿ ಇದ್ದೆವು. ಆದರೆ 250ಕ್ಕೂ ಹೆಚ್ಚ ಮಂದಿ ನಮ್ಮ ಮೇಲೆ ಕಲ್ಲು ತೂರಿದ್ದರು. ಬಳಿಕ ಪೆಟ್ರೋಲ್ ಬಾಂಬ್ ಎಸೆದರು. ಜೀವ ರಕ್ಷಣೆಗೆ ನಾವು ಓಡಿದೆವು. 15 ರಿಂದ 10 ಪೊಲೀಸರು ಒಂದು ಮನೆಯೊಳಗೆ ಸೇರಿದೆವು. ಆದರೆ ಮನೆಯ ಮೇಲೆ ಕಲ್ಲುತೂರಾಟ ಆರಂಭಗೊಂಡಿತು. ಪೆಟ್ರೋಲ್ ಬಾಂಬ್ ಎಸೆದರು. ಬಾಗಿಲಿಗೆ ಪೆಟ್ರೋಲ್ ಸುರಿದು ಜೀವಂತ ಸುಡುವ ಪ್ರಯತ್ನ ಮಾಡಿದರು.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಲೋಕೇಶನ್ ಕಳುಹಿಸಿದೆವು. ಹೀಗಾಗಿ ಪೊಲೀಸರು ಆಗಮಿಸಿ ನಮ್ಮನ್ನ ರಕ್ಷಿಸಿದರು. ಈ ವೇಳೆ ಮನೆ ಕಟ್ಟಡದ ಮೇಲಿನಿಂದ ಕಲ್ಲು ತೂರಾಟ ನಡೆಸಿದರು. ಹಲವು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವರು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *