ನವದೆಹಲಿ: ಭಾರತ್ ಜೋಡೋ ಯಾತ್ರೆಯಂತೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭಗೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನಸಾಮಾನ್ಯರ ಜತೆಗೆ ಮಾತುಕತೆ ನಡೆಸುತ್ತ, ಸಮಸ್ಯೆಗಳನ್ನು ಆಲಿಸುತ್ತ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಇಂದು ಯಾತ್ರೆ ನಾಗಾಲ್ಯಾಂಡ್ ತಲುಪಿದ್ದು, ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
8:00 ವಿಶ್ವೇಮಾ, ಕೊಹಿಮಾದಿಂದ ಯಾತ್ರೆ ಪುನರಾರಂಭ ಆಗಿದ್ದು,
9:00-9:20 ಕೊಹಿಮಾ ಯುದ್ಧ ಸ್ಮಶಾನದಲ್ಲಿ ಗೌರವ ಸಲ್ಲಿಸಲಾಗುವುದು
9:30 ಫುಲ್ಬರಿಯಿಂದ ಬಸ್ ನಲ್ಲಿ ಪ್ರಯಾಣ
12:00 ಚಿಫೋಬೋಝೌ ಟೌನ್ SCERT ಕಾಲೇಜ್ ಗ್ರೌಂಡ್ ನಲ್ಲಿ ವಿರಾಮ
14:30 ರೆಂಗ್ಮಾ ಸ್ಪೋರ್ಟ್ಸ್ ಅಸೋಸಿಯೇಷನ್ ಗ್ರೌಂಡ್ ಬಳಿ ಯಾತ್ರಾ ಪುನರಾರಂಭ
16:30 ವೋಖಾದವರೆಗೆ ಬಸ್ ನಲ್ಲಿ ಪ್ರಯಾಣ
ಚುಕಿಟಾಂಗ್ ನಲ್ಲಿ ರಾತ್ರಿ ನಿಲುಗಡೆ ಮಾಡಲಾಗುತ್ತದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ಇದು 6,713 ಕಿಮೀ ಗಳನ್ನು ಕ್ರಮಿಸುತ್ತದೆ. ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ ಎಂದು ವೇಳಾಪಟ್ಟಿಯಲ್ಲಿ ತಿಳಿಸಿದ್ದಾರೆ.
Shri @RahulGandhi will hold a special press conference in Nagaland today.
Stay tuned to our social media handles for live updates.
📺 https://t.co/4uLWRC44PR pic.twitter.com/rpiRhwW1gT
— Congress (@INCIndia) January 16, 2024