‘ನಾನು ಓದುತ್ತಿದ್ದೇನೆ’: ಸರ್ಕಾರಿ ಶಾಲೆ ಮಕ್ಕಳಿಗಾಗಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ನವೆಂಬರ್,8,2024 (www.justkannada.in): ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದಕ್ಷಿಣ ವಲಯ ಮೈಸೂರು ಇವರ ವತಿಯಿಂದ ಮೈಸೂರು ದಕ್ಷಿಣ ವಲಯದಲ್ಲಿ ‘ನಾನು ಓದುತ್ತಿದ್ದೇನೆ’  ಎಂಬ ವಿನೂತನ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯಿತ್ರಿ  ಅವರು ಉದ್ಘಾಟಿಸಿದರು.

ದಕ್ಷಿಣ ವಲಯದಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಐದನೇ ತರಗತಿಯಿಂದ ಹತ್ತನೇ ತರಗತಿಗೆ ವ್ಯಾಸಂಗ ಮಾಡುತ್ತಿರುವ 12,688 ವಿದ್ಯಾರ್ಥಿಗಳಿಗೆ ಪ್ರತಿದಿನ ಓದುವ ಅಭಿಯಾನ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಬ್ರೋಚರ್ ಗಳು,  ದಿನಚರಿ ಹಾಗೂ ಪೋಸ್ಟರ್ ಗಳನ್ನ ವಿತರಿಸಲಾಯಿತು.

ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಓದುವ ಹವ್ಯಾಸವನ್ನ ಮೂಡಿಸುವ ಸಲುವಾಗಿ ಬೆಳಗಿನ ಜಾವ ಐದು ಗಂಟೆಗೆ ವಿದ್ಯಾರ್ಥಿ ಎದ್ದು ಓದುವುದು,  ಓದು ಓದಿದ ವಿಷಯವನ್ನು ದಿನಚರಿ ಕಾರ್ಡ್ ನಲ್ಲಿ ಬರೆಯುವುದು ಮತ್ತು ಅದಕ್ಕೆ ಪೋಷಕರು ಸಹಿ ಮಾಡುವುದು ಮತ್ತು ಅದೇ ದಿನ ತರಗತಿಯ ಶಿಕ್ಷಕರು ವಿದ್ಯಾರ್ಥಿಯ ಕಾರ್ಡನ್ನು ಪರಿಶೀಲಿಸಿ ಮಗು ಬೆಳಿಗ್ಗೆ ಎದ್ದು ಓದಿದ್ದಾನೆ ಎಂಬುದನ್ನ ಪರಿಶೀಲಿಸುವುದು. ಆಗಿದ್ದಾಗೆ ಪೋಷಕರ ಸಭೆ ಕರೆದು ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಓದುವ ಅಭಿಯಾನದ ಬಗ್ಗೆ ಪರಿಶೀಲನೆ ನಡೆಸುವುದು ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ.

ಕಾರ್ಯಕ್ರಮದಲ್ಲಿ ಉಪ ನಿರ್ದೇಶಕರಾದ ಜವರೇಗೌಡರು, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿಎನ್ ರಾಜು. ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಕಂಠಸ್ವಾಮಿ. ಜಿಲ್ಲಾ ಮಟ್ಟದ ಅಧಿಕಾರಿಗಳಾದ  ಶೋಭಾ.. ನಿರೂಪಾವಿಸ್ಲಿ. ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕೃಷ್ಣ,  ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು,  ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು,  ಸಹ ಶಿಕ್ಷಕರ ಸಂಘದ ಅಧ್ಯಕ್ಷರು  ಹಾಗೂ ಐದರಿಂದ 10ನೇ ತರಗತಿ ಬೋಧನೆ ಮಾಡುವ ಎಲ್ಲಾ ತರಗತಿ ಶಿಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Key words:  mysore, I am reading, government school, children

Font Awesome Icons

Leave a Reply

Your email address will not be published. Required fields are marked *