ನಾಳೆಯಿಂದ ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಬರೋಬ್ಬರಿ 37 ವಾರಗಳ ನಂತರ ವಿರಾಟ್ ಕೊಹ್ಲಿ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಇವರು ಬಾಂಗ್ಲಾದೇಶದ ಬೌಲರ್ಗಳನ್ನು ಕಾಡಲಿದ್ದು, ಇಡೀ ಕ್ರೀಡಾಲೋಕದ ಕಣ್ಣು ಸ್ಟಾರ್ ಆಟಗಾರನ ಮೇಲೆ ನೆಟ್ಟಿದೆ. ಕೊಹ್ಲಿ ಬಾಂಗ್ಲಾ ವಿರುದ್ಧ ಈಗಾಗಲೇ ದ್ವಿಶತಕದ ಸಾಧನೆ ಮಾಡಿದ್ದಾರೆ. ಇವರು ಸ್ಪಿನ್ ಆಗಲಿ, ಪೇಸ್ ಬೌಲಿಂಗ್ನಲ್ಲಿ ಸರಾಗವಾಗಿ ರನ್ ಕಲೆ ಹಾಕಬಲ್ಲರು.
ಟೀಮ್ ಇಂಡಿಯಾದ ಸ್ಟಾರ್ ಕ್ಯಾಪ್ಟನ್ ರೋಹಿತ್ ಶರ್ಮಾ. ಸಖತ್ ಫಾರ್ಮ್ನಲ್ಲಿರೋ ರೋಹಿತ್ ಬಾಂಗ್ಲಾ ಬೌಲರ್ಗಳ ನಿದ್ದೆಗೆಡಿಸಲಿದ್ದಾರೆ. ಇನಿಂಗ್ಸ್ ಆರಂಭದಿಂದಲೂ ಕ್ರೀಸ್ನಲ್ಲಿ ಇರೋವರೆಗೂ ರೋಹಿತ್ ಅಮೋಘವಾಗಿ ಬ್ಯಾಟ್ ಬೀಸಬಲ್ಲರು. ಇವರ ಫಾರ್ಮ್ ಬಾಂಗ್ಲಾದೇಶಕ್ಕೆ ತಲೆನೋವಾಗಿದೆ.
ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಪಂತ್. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಎತ್ತಿದ ಕೈ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಪಂತ್ ಮೇಲಿನ ಭರವಸೆಯನ್ನು ಹೆಚ್ಚಿಸಿದೆ. ದೇಶೀಯ ಕ್ರಿಕೆಟ್ ದುಲೀಪ್ ಟ್ರೋಫಿಯಲ್ಲೂ ಪಂತ್ ಸ್ಥಿರ ಪ್ರದರ್ಶನ ನೀಡಿ ಬಿಸಿಸಿಐ ಸೆಲೆಕ್ಟರ್ಸ್ ಗಮನ ಸೆಳೆದಿದ್ದರು.