ಮಂಗಳೂರು: ಕಾಣಿಯೂರು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಗ್ರೀಷ್ಮ ರೈ ಯವರು 1 ಗಂಟೆಯಲ್ಲಿ 81 ಬಾರಿ ನಿರಂತರವಾಗಿ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.
9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ಶಾಸ್ತ್ರೀಯ ಸಂಗೀತವನ್ನು ವಿದುಷಿ ಪಾರ್ವತಿ ಭಟ್ ಮತ್ತು ಸುಗಮ ಸಂಗೀತವನ್ನು ಪುತ್ತೂರು ಗಾನಸಿರಿ ಕಲಾ ಕೇಂದ್ರದ ಡಾ. ಕಿರಣ್ ಕುಮಾರ್ ಮತ್ತು ಶ್ರೀ ಲಕ್ಷಿ ಎಸ್ ಪುತ್ತೂರು ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಬೆಳಂದೂರು ಗ್ರಾಮದ ಕಾರ್ಕಳ ನಿವಾಸಿ ಹರೀಶ್ ರೈ ಮತ್ತು ಶಂಕರಿ ರೈ ದಂಪತಿಯ ಪುತ್ರಿ.