ನೀತಿ ಆಯೋಗದ ಸಭೆಯಿಂದ ಹೊರನಡೆದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ನವದೆಹಲಿ,ಜುಲೈ,27,2024 (www.justkannada.in): ಮಾತನಾಡಲು ಹೆಚ್ಚಿನ ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಯಿಂದ ಹೊರೆ ನಡೆದರು.

ಇಂದು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೊಗದ ಸಭೆ ನಡೆಸಲಾಗಿತ್ತು. ಆದರೆ ಸಭೆಯಲ್ಲಿ ವಿಪಕ್ಷಗಳ ಕಡೆಯಿಂದ ನಾನೋಬ್ಬಳೆ ಭಾಗವಹಿಸಿದ್ದು ಆದರೆ ನನಗೆ ಮಾತನಾಡಲು ಸಮಯಾವಕಾಶ ನೀಡಲಿಲ್ಲ. ನಾನು ಮಾತನಾಡುವಾಗ ಮೈಕ್ ಆಫ್ ಆಗಿತ್ತು ಆಯೋಗದ ಸಭೆಯಲ್ಲಿ ಭಾಷಣ ಮುಗಿಸಲು ಕೂಡ ಅವಕಾಶ ನೀಡಲಿಲ್ಲ ಎಂದು ಮಮತಾ ಬ್ಯಾನರ್ಜಿ ಆರೋಪಿಸಿ ಸಭೆಯಿಂದ ಹೊರ ನಡೆದಿದ್ದಾರೆ.

ಜುಲೈ 23 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ರಾಜಕೀಯ ಪಕ್ಷಪಾತದಿಂದ ಕೂಡಿದೆ. ನಾನು ಸಭೆಯನ್ನು ಬಹಿಷ್ಕರಿಸಿ ಹೊರಬಂದಿದ್ದೇನೆ. ಬೇರೆ ರಾಜ್ಯಗಳ  ಸಿಎಂ ಗಳಿಗೆ 0-12 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಯಿತು. ನನಗೆ ಕೇವಲ ಐದು ನಿಮಿಷ ಮಾತನಾಡಲು ಅವಕಾಶ ನೀಡಿದ್ದರು. ನನ್ನ ಮೈಕ್ ಆಫ್ ಆಗಿತ್ತು. ನೀವು ನನ್ನನ್ನು ಏಕೆ ತಡೆದಿದ್ದೀರಿ, ಏಕೆ ತಾರತಮ್ಯ ಮಾಡುತ್ತಿದ್ದೀರಿ ಎಂದು ನಾನು ಕೇಳಿದೆ.  ನೀವು ನಿಮ್ಮ ಪಕ್ಷಕ್ಕೆ, ನಿಮ್ಮ ಸರ್ಕಾರಕ್ಕೆ ಹೆಚ್ಚಿನ ಅವಕಾಶ ನೀಡುತ್ತಿದ್ದೀರಿ. ಇದು ಬಂಗಾಳಕ್ಕೆ ಮಾತ್ರವಲ್ಲ, ಎಲ್ಲಾ ಪ್ರಾದೇಶಿಕ ಪಕ್ಷಗಳಿಗೂ ಮಾಡಿದ ಅವಮಾನ. ಇದು ಅನ್ಯಾಯ” ಎಂದು  ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

Key words: Mamata Banerjee, walked out, Niti Aayog, meeting






Previous articleಬಜೆಟ್ ನಲ್ಲಿ ಎಲ್ಲಾ ಸಮುದಾಯಕ್ಕೆ ನ್ಯಾಯ: ರೈತರು, ಮಹಿಳಾ ಸಬಲೀಕರಣಕ್ಕೆ ಬದ್ಧ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


Font Awesome Icons

Leave a Reply

Your email address will not be published. Required fields are marked *