ನ್ಯಾಯಾಲಯದಲ್ಲಿ ನರೇಶ್-ಪವಿತ್ರಾಗೆ ಗೆಲುವು: ರಮ್ಯಾ ಅರ್ಜಿ ವಜಾ

ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧದ ಕುರಿತು ಕಳೆದ ವರ್ಷ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡದೆ ಪವಿತ್ರಾ ಲೋಕೇಶ್ ಅವರನ್ನು ಕಾನೂನು ಬಾಹಿರವಾಗಿ ವಿವಾಹವಾಗಿದ್ದಾರೆಂದು, ತಮಗೆ ಅನ್ಯಾಯ ಮಾಡಿದ್ದಾರೆಂದು ರಮ್ಯಾ ರಘುಪತಿ ಸುದ್ದಿಗೋಷ್ಠಿ ನಡೆಸಿ ಅಳಲು ತೋಡಿಕೊಂಡಿದ್ದರು. ಬಳಿಕ ನರೇಶ್ ಹಾಗೂ ಪವಿತ್ರಾ ಒಟ್ಟಿಗಿದ್ದ ಹೋಟೆಲ್​ ಬಳಿ ಹೋಗಿ ರಮ್ಯಾ ಜಗಳ ಮಾಡಿದ್ದರು.

ಇನ್ನು ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮಳ್ಳಿ ಪೆಳ್ಳಿ ಸಿನಿಮಾ ಮೇ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಸಿನಿಮಾ ವಿರುದ್ಧ ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ರು. ಕೇಸ್​ಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ರಮ್ಯಾ ಬಿಗ್ ಶಾಕ್ ನೀಡಿದೆ.

ಹಿರಿಯ ನಟ ನರೇಶ್, ರಮ್ಯಾ ರಘುಪತಿ ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಳ್ಳಿ ಪೆಳ್ಳಿ (ತೆಲುಗು), ಮತ್ತೆ ಮದುವೆ (ಕನ್ನಡ) ಚಿತ್ರಗಳನ್ನು ಥಿಯೇಟರ್ ಮತ್ತು ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ತಡೆಯಾಜ್ಞೆ ಮೊಕದ್ದಮೆ ಹೂಡಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಆಗಸ್ಟ್ 1, 2023 ರಂದು ತೀರ್ಪು ನೀಡಿತು. ರಮ್ಯಾ ರಘುಪತಿ ಸಲ್ಲಿಸಿದ ಮೊಕದ್ದಮೆಯಲ್ಲಿ ನಿಖರ ಕಾರಣದ ಕೊರತೆಯಿದೆ ಎಂದು ಕೋರ್ಟ್ ಕೇಸ್ ವಜಾಗೊಳಿಸಿದೆ.

ಸಿನಿಮಾ ಬಿಡುಗಡೆಯ ವಿರುದ್ಧ ರಮ್ಯಾ ರಘುಪತಿ ಪ್ರಕರಣ ದಾಖಲಿಸಿದ ಆಧಾರವನ್ನು ನ್ಯಾಯಾಲಯ ಎತ್ತಿ ಹಿಡಿಯಲಿಲ್ಲ. ಮೇಲಾಗಿ, ಕಾನೂನಿನ ದೃಷ್ಟಿಯಿಂದ ಇದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ. ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಆಫ್ ಇಂಡಿಯಾ ಪ್ರಮಾಣಪತ್ರ ನೀಡಿರುವಂತೆ ಚಿತ್ರದ ವಿಷಯವು ಸಂಪೂರ್ಣವಾಗಿ ಕಾಲ್ಪನಿಕವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Font Awesome Icons

Leave a Reply

Your email address will not be published. Required fields are marked *