ಹೆಚ್.ಡಿ.ಕೋಟೆ : ರೈತ ವಿರೋಧಿ ನೀತಿಗಳನ್ನು ವಾಪಸ್ಸು ಪಡೆಯುತ್ತೇನೆ ಎಂದು ಹೇಳಿ ಇನ್ನೂ ವಾಪಸ್ಸು ಪಡೆಯದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯದ ವಿವಿಧ ಸಂಘಟನೆಗಳಿಂದ ಪ್ರತಿಭಟನಾ ರಾಲಿಯನ್ನು ನ.26 ಮೈಸೂರಿನಲ್ಲಿ ಟೌನ್ ಹಾಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿ.ಪಿ.ಐ ಎಂ ಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ ತಿಳಿಸಿದರು.
ಈ ಕುರಿತಂತೆ ಮಾಹಿತಿ ನೀಡಿರುವ ಅವರು ಕೇಂದ್ರ ಸರ್ಕಾರ ರೈತರು, ಕಾರ್ಮಿಕರು, ಕೃಷಿಕರ ಮೇಲೆ ಹಲವಾರು ರೀತಿಯ ಸರ್ವಾಧಿಕಾರ ಧೋರಣೆಯನ್ನ ನಡೆಸುತ್ತಾ ಬಂದಿದೆ. ಅದರ ಅಂಗವಾಗಿ ನೊಂದ ರೈತರ ವಿರುದ್ಧ ಕಾಯ್ದೆಗಳನ್ನ ವಾಪಸ್ಸು ತೆಗೆದುಕೊಳ್ಳದೆ ರೈತರ ಮೇಲೆ ದೌರ್ಜನ್ಯ ಎಸಗಿದ್ದು, ಇದನ್ನು ವಿರೋಧಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿರುವುದರಿಂದ ಹೆಚ್ ಡಿ ಕೋಟೆ, ಸರಗೂರು ತಾಲೂಕಿನಿಂದ ಎಲ್ಲಾ ಸಂಘಟನೆಗಳು ಈ ಪ್ರತಿಭಟನಾ ಮೆರವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಸಂಸ ಜಿಲ್ಲಾ ಸಂಚಾಲಕ ಆನಗಟ್ಟಿ ದೇವರಾಜ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಮಾದೇವ ನಾಯಕ, ಆರ್ ಪಿ ಐ ಮಹಿಳಾ ಜಿಲ್ಲಾ ಅಧ್ಯಕ್ಷೆ ಅನುಷಾ, ಪುಟ್ಟಮಾದು, ಮಾಹದೇವಯ್ಯ, ಸಿಪಿಎಂ ಶಿವಣ್ಣ, ಅಕ್ಬರ್ ಪಾಷಾ, ಪಳನಿ ಸ್ವಾಮಿ ಮೊದಲಾದವರು ಇದ್ದರು.