ಉಡುಪಿ: ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ವತಿಯಿಂದ ರೋಟರಿ ಕ್ಲಬ್ ಕಲ್ಯಾಣಪುರ, ಲಯನ್ಸ್ ಮತ್ತು ಲಿಯೋ ಕ್ಲಬ್ ಉಡುಪಿ, ಅಮೃತ್, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಹಾಗೂ ಅದಿತ್ಯ ಟ್ರಸ್ಟ್ ನಕ್ರೆ ಇವರ ಸಹಯೋಗದಲ್ಲಿ ಉಚಿತ ವಾಕ್ ಮತ್ತು ಶ್ರವಣ ದೋಷ ಪರೀಕ್ಷೆ ಹಾಗೂ ಶ್ರವಣ ಸಾಧನಾ ವಿತರಣಾ ಶಿಬಿರವನ್ನು ಇದೇ ನ. 28ರಂದು ಬೆಳ್ಳಿಗೆ 8.30ಕ್ಕೆ ಅಂಬಾಗಿಲಿನ ಅಮೃತ ಗಾರ್ಡನ್ ಆಯೋಜಿಸಲಾಗಿದೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ವಿಜಯ ಕೊಡವೂರು ತಿಳಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಸುಮಾರು 500 ವಾಕ್ ಮತ್ತು ಶ್ರವಣದೋಷ ಉಳ್ಳ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ. ಸುಮಾರು 300 ಶ್ರವಣ ಸಾಧನಗಳನ್ನು ವಿತರಿಸಲಾಗುವುದು ಎಂದರು.
ಶಿಬಿರದಲ್ಲಿ ಭಾಗವಹಿಸುವ ಫಲಾನುಭವಿಗಳು ಇತ್ತೀಚಿನ ಭಾವಚಿತ್ರದ 3 ಪ್ರತಿ, ಆಧಾರ ಕಾರ್ಡ್ ಮೂಲ ಪ್ರತಿ ಹಾಗೂ 3 ನಕಲು ಪ್ರತಿ, ಬಿ.ಪಿ. ಎಲ್ ಕಾರ್ಡ್ / ಅಂತ್ಯೋದಯ ಕಾರ್ಡ್ ಮೂಲ ಪ್ರತಿ ಹಾಗೂ 3 ನಕಲು ಪ್ರತಿ ಆದಾಯ ಪ್ರಮಾಣ ಪತ್ರದ ಮೂಲ ಪ್ರತಿ ಹಾಗೂ 03 ನಕಲು ಪ್ರತಿ, 15 ವರ್ಷದ ಒಳಗಿನ ಮಕ್ಕಳು ಫಲಾನುಭವಿಯಾದಲ್ಲಿ ತಂದೆ ತಾಯಿಯ ಭಾವಚಿತ್ರ 3 ಪ್ರತಿ, ಆಧಾರ ಕಾರ್ಡಿನ ಮೂಲ ಪ್ರತಿ ಹಾಗೂ ಬಿ.ಪಿ. ಎಲ್ ಕಾರ್ಡ್/ ಅಂತ್ಯೋದಯ ಕಾರ್ಡ್ ಮೂಲ ಪ್ರತಿ ಹಾಗೂ ನಕಲು ಪ್ರತಿ ತರಬೇಕು ಎಂದು ತಿಳಿಸಿದರು.