ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ!

ಮಂಗಳೂರು : ನಗರಕ್ಕೆ ಪ್ರವೇಶ ಪಡೆಯುವ ಪಂಪ್‌ ವೆಲ್ – ಪಡೀಲ್ ಮುಖ್ಯ ರಸ್ತೆ ಕಾಂಕ್ರೀಟ್ ಕಾಮಗಾರಿ ಸುಮಾರು ಮೂರು ವರ್ಷಗಳ ಹಿಂದೆ ಆರಂಭ ಗೊಂಡಿದ್ದು, ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಅರೆ ಬರೆ ಕಾಮಗಾರಿಯ ಪರಿಣಾಮ ಈ ರಸ್ತೆಯಲ್ಲಿ ವಾಹನ ಸವಾರರಿಗೆ ನಿತ್ಯ ಟ್ರಾಫಿಕ್ ಜಾಮ್ ಬಿಸಿ ತಪ್ಪುತ್ತಿಲ್ಲ.

ಪೂರ್ಣಗೊಳ್ಳಬೇಕಿದ್ದ ಈ ರಸ್ತೆ ಕಾಮಗಾರಿ ಆರಂಭದಿಂದಲೇ ಆಮೆಗತಿಯಲ್ಲಿ ನಡೆದಿತ್ತು. ನಾಗುರಿ ಬಳಿ ಪೈಪ್‌ಲೈನ್ ಅಳವಡಿಕೆ ಬಾಕಿ ಇರುವ ಕಾರಣ ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕು. ಇದೇ ರಸ್ತೆಯ ನಾಗುರಿ ಸಮೀಪ ಪೈಪ್‌ಲೈನ್ ಅಳವಡಿಕೆ ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಳಿಸಲು ಹಿನ್ನಡೆಯಾಗಿದೆ.

ಸುಮಾರು 170 ಮೀ. ನಷ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ನ ಮುಖ್ಯ ಕೊಳವೆ ಅಳವಡಿಕೆ ಕಾರ್ಯ ಇರುವ ಕಾರಣದಿಂದಾಗಿ ಒಂದು ಭಾಗದ ರಸ್ತೆ ನಿರ್ಮಾಣ ಕಾರ್ಯ ಅಪೂರ್ಣವಾಗಿದೆ. ಇದು ಬೆಳಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ನಿತ್ಯ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ಎರಡೂ ಬದಿಯಲ್ಲಿ ತೆರಳಬೇಕಾದ ವಾಹನಗಳು ಒಂದೇ ಕಡೆ ಸಂಚರಿಸುವ ಕಾರಣ ಹಾಗೂ ಇದೇ ಪ್ರದೇಶದಲ್ಲಿ ಬಸ್ ತಂಗುದಾಣ ಇರುವ ಕಾರಣ ಸಮಸ್ಯೆಯಾಗಿದೆ.

ರ (1)

ನಗರದಲ್ಲಿ ಸುಮಾರು 50 ವರ್ಷ ಹಳೆಯ ನೀರಿನ ಪೈಪ್‌ಲೈನ್ ಇದ್ದು, ಇದರಿಂದ ಹಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ತುಂಬೆಯಿಂದ ಬೆಂದೂರು ಹಾಗೂ ಪಣಂಬೂರಿಗೆ ತೆರಳುವ ಮುಖ್ಯ ಕೊಳವೆಯು ನಾಗುರಿ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿದೆ. ಇದರಿಂದ ನೀರು ಪೋಲಾಗುತ್ತಿದೆ. ಒಂದೊಮ್ಮೆ ಕಾಂಕ್ರೀಟ್ ಕಾಮಗಾರಿ ನಡೆದಲ್ಲಿ ಮತ್ತೆ ಕಾಂಕ್ರೀಟ್ ಅಗೆಯುವ ಪ್ರಸಂಗ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಪೈಪ್‌ಲೈನ್ ದುರಸ್ತಿಗೆ ಮುಂದಾಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗುರಿ ಭಾಗದಲ್ಲಿ ಪೈಪ್‌ಲೈನ್ ಅಳವಡಿಕೆ ಬಾಕಿ ಉಳಿದಿರುವ ಕಾರಣದಿಂದಾಗಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಇದೀಗ ಪಾಲಿಕೆ ಪೈಪ್ ಅಳವಡಿಕೆಗೆ ಮುಂದಾಗಿದ್ದು, ಗುತ್ತಿಗೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಈಗಾಗಲೇ ಕೊಳವೆಗಳನ್ನು ತರಿಸಿಕೊಳ್ಳಲಾಗಿದೆ.

ಪಡೀಲ್ ಪಂಪ್‌ವೆಲ್ ರಸ್ತೆಯ ಪಂಪವೆಲ್ ಫೈ ಓವರ್ ಸಮೀಪದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಆ ಪ್ರದೇಶದಲ್ಲಿ ಕಳೆದ ಹಲವು ಸಮಯದಿಂದ ಹೊಂಡಗಳು ನಿರ್ಮಾಣವಾಗಿದ್ದರೂ ಪಾಲಿಕೆಯಾಗಲಿ, ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಿ ದುರಸ್ತಿಗೊಳಿಸುವ ಗೋಜಿಗೆ ಹೋಗದಿರುವ ಕಾರಣ ಸವಾರರಿಗೆ ಸಮಸ್ಯೆಯಾಗಿದೆ. ಮತ್ತು ಅಪಘಾತಕಾಗಿ ಕಾಯುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *