ಪತಿಯ ಸ್ಥಾನ ಅಲಂಕರಿಸಿದ ಪತ್ನಿ: ರಾಜ್ಯದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ಜುಲೈ, 26, 2024 (www.justkannada.in):  ಕರ್ನಾಟಕ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು,ಈ ಹಿನ್ನೆಲೆಯಲ್ಲಿ ಮುಂದಿನ ಮುಖ್ಯ ಕಾರ್ಯದರ್ಶೀಯಾಗಿ ಶಾಲಿನಿ ರಜನೀಶ್‌ ಅವರನ್ನ ನೇಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ಅಧಿಕೃತ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಹಾಲಿ ಸಿಎಸ್​ (ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ) ರಜನೀಶ್ ಗೋಯಲ್ ಐದು ದಿನದಲ್ಲಿ​ ನಿವೃತ್ತಿ ಆಗಲಿದ್ದಾರೆ. ಹೀಗಾಗಿ ನೂತನ ಸಿಎಸ್​ ಆಗಿ ಶಾಲಿನಿ ರಜನೀಶ್ ​ರನ್ನು ನೇಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಈ ಮೂಲಕ ಪತಿ ನಿವೃತ್ತಿ ಬೆನ್ನಲ್ಲೇ  ಪತಿಯ ಸ್ಥಾನವನ್ನ ಅಲಂಕರಿಸಿದ ಪತ್ನಿ ಅಲಂಕರಿಸಲಿದ್ದಾರೆ. 1989ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.

Key words: Shalini Rajneesh, State’s,  Next, Chief Secretary

 

Font Awesome Icons

Leave a Reply

Your email address will not be published. Required fields are marked *