ಪತ್ರಕರ್ತರ ಮಕ್ಕಳಿಗೆ ‘ಪತ್ರಕರ್ತ-ಮಿತ್ರ’ ಶೀರ್ಷಿಕೆಯಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ನವೆಂಬರ್,11,2024 (www.justkannada.in): ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸ್ಪರ್ಧಾಮಿತ್ರ IAS ಅಕಾಡೆಮಿ. ವಿಜಯನಗರ, ಬೆಂಗಳೂರು ಇವರ ಸಹಯೋಗದೊಂದಿಗೆ ‘ಪತ್ರಕರ್ತ-ಮಿತ್ರ’ ಶೀರ್ಷಿಕೆಯಡಿ, ಕರ್ನಾಟಕ ರಾಜ್ಯದ ಪತ್ರಕರ್ತರ ಮಕ್ಕಳಿಗೆ IAS/KAS/BANKING ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಶೇ. 50% ರಷ್ಟು ರಿಯಾಯಿತಿ ದರದಲ್ಲಿ ತರಬೇತಿ ನೀಡಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸ್ಪರ್ಧಾಮಿತ್ರ ಸಂಸ್ಥೆಯ ನಿರ್ದೇಶಕಓಂಕಾರ್ ಪಟೇಲ್,  ನಾನು ಹಲವು ವರ್ಷಗಳ ಕಾಲ ಪತ್ರಕರ್ತನಾಗಿ ಕಾರ್ಯ ನಿರ್ವಹಿಸಿದ್ದು, ಈ ಹಿನ್ನೆಲೆಯಲ್ಲಿ ಪತ್ರಕರ್ತರ ಹಾಗೂ ಹೋಗುಗಳನ್ನು ಮನಗಂಡು, ನನ್ನ ಪತ್ರಕರ್ತ ಮಿತ್ರರಿಗೆ ನೈತಿಕವಾಗಿ ಹಾಗೂ ಆರ್ಥಿಕವಾಗಿ ನೆರವು ನೀಡುವ ಹೆಬ್ಬಯಕೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗಲು ಪತ್ರಕರ್ತರ ಮಕ್ಕಳಿಗೆ ಶೇ. 50% ರಷ್ಟು ರಿಯಾಯಿತಿ ದರದಲ್ಲಿ ತರಬೇತಿ ನೀಡಲು ಸ್ಪರ್ಧಾಮಿತ್ರ ಸಂಸ್ಥೆಯಿಂದ ನಿರ್ಧರಿಸಲಾಗಿದೆ.

ಆದ್ದರಿಂದ ನನ್ನ ಪತ್ರಕರ್ತ ಮಿತ್ರರು ತಮ್ಮ ತಮ್ಮ ಮಕ್ಕಳನ್ನು ಸ್ಪರ್ಧಾಮಿತ್ರ ಸಂಸ್ಥೆಯಲ್ಲಿ ತರಬೇತಿಗೆ ದಾಖಲಾತಿ ಮಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಓಂಕಾರ್ ಪಟೇಲ್, ನಿರ್ದೇಶಕರು, ಸ್ಪರ್ಧಾಮಿತ್ರ ಕೋಚಿಂಗ್ ಸೆಂಟರ್, ಬೆಂಗಳೂರು, ಮೈಸೂರು. PH:- 9535111188 / 9535111199

Key words: journalists, children, competitive, examination, Training, Spardha mitra

Font Awesome Icons

Leave a Reply

Your email address will not be published. Required fields are marked *