ಬೆಂಗಳೂರು,ಜುಲೈ,25,2024 (www.justkannada.in): ಮುಡಾ ಹಗರಣ ಚರ್ಚೆಗೆ ಆಗ್ರಹಿಸಿ ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಬಿಗಿಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪುನರ್ ಪರಿಶೀಲನೆಗೆ ಸಭಾಪತಿಗೆ ಬಿಜೆಪಿ ಸದಸ್ಯರು ಮನವಿ ಮಾಡಿದರು. ಆದರೆ ಸಭಾಪತಿ ಬಸವರಾಜ ಹೊರಟ್ಟಿ ಮನವಿಯನ್ನ ತಿರಸ್ಕರಿಸಿದರು.
ಈ ಹಿನ್ನೆಲೆಯಲ್ಲಿ ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅವಧೀಯಲ್ಲೇ ಸೈಟ್ ಹಂಚಿಕೆಯಾಗಿದೆ. ಇಂಥಾ ಕಡೆ ಸೈಟ್ ಕೋಡಿ ಎಂದು ನಾನು ಕೇಳಿಲ್ಲ. ಮುಡಾ ಹಗರಣದ ತನಿಖೆಗೆ ಸಮಿತಿ ರಚನೆ ಮಾಡಿದ್ದೇವೆ. ಬಿಜೆಪಿ ಸದಸ್ಯ ಅಧ್ಯಕ್ಷರಾಗಿದ್ದ ವೇಳೆ ಸೈಟ್ ಹಂಚಿಕೆಯಾಗಿದೆ ನನಗೆ ಮಸಿ ಬಳಿಯುವುದೇ ನಿಮ್ಮ ಉದ್ದೇಶ. ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಅದಕ್ಕೆ ವಿಪಕ್ಷಗಳಿಗೆ ಹೊಟ್ಟೆ ಕಿಚ್ಚು. ಅದಕ್ಕೆ ಈ ರೀತಿ ಗಲಾಟೆ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಸದಸ್ಯರು ಸಿಎಂ ವಿರುದ್ದ ಧಿಕ್ಕಾರ ಕೂಗಿದರು. ಪ್ರತಿಯಾಗಿ ಬಿಜೆಪಿಗೆ ಧಿಕ್ಕಾರ ಎಂದು ಸಿಎಂ ಸಿದ್ದರಾಮಯ್ಯ ಪ್ರತಿ ಘೋಷಣೆ ಮಾಡಿದರು.
Key words: BJP, Muda scam, CM Siddaramaiah, outraged