ಗುಂಡ್ಲುಪೇಟೆ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯಾದ ಗುಂಡ್ಲುಪೇಟೆ ತಾಲೂಕಿನ ಭೀಮನಭೀಡು ಗ್ರಾಮದ ಯುವಕ ರಾಜೇಂದ್ರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ನಮಿಸಲು ಪಾದಯಾತ್ರೆ ಆರಂಭಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಅಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಿರೋ ರಾಜೇಂದ್ರ ಡಾ.ರಾಜ್ ಕುಮಾರ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದು ಒಮ್ಮೆಯಾದರೂ ಅಪ್ಪುವನ್ನ ಹತ್ತಿರದಿಂದ ಭೇಟಿಯಾಗುವ ಬಯಕೆ ಹೊಂದಿದ್ದರು ಆದ್ರೆ ಅದು ಆಗಲಿಲ್ಲ ಅಪ್ಪು ಅಕಾಲಿಕ ಮರಣದಿಂದ ನನ್ನ ಆಸೆ ಪಲಿಸಲಿಲ್ಲ ಎಂಬ ನೋವಿನ ಮಾತುಗಳನ್ನಾಡಿದ್ದಾರೆ.
ಈಗಾಗಲೇ ತನ್ನ ಸ್ವಗ್ರಾಮದಿಂದ ಹೊರಟಿರೋ ರಾಜೇಂದ್ರ ಸರಿಸುಮಾರು 230 ಕಿಲೋಮೀಟರ್ ಕ್ರಮಿಸಿ ಪವರ್ ಸ್ಟಾರ್ ಸಮಾಧಿಗೆ ತೆರಳಿ ನಮನ ಸಲ್ಲಿಸಿ ವಾಪಾಸ್ಸಾಗುವೆ ಎಂದು ತಿಳಿಸಿದ್ದು ಗ್ರಾಮದ ಮಂಜು, ಮಣಿ ಇನ್ನಿತರ ಸ್ನೇಹಿತರು ರಾಜೇಂದ್ರನನ್ನ ಬೀಳ್ಕೊಟ್ಟಿದ್ದಾರೆ.