ನವದೆಹಲಿ: ಹಿರಿಯ ನಾಯಕ ಶರದ್ ಪವಾರ್ ಬಣಕ್ಕೆ ಚುನಾವಣಾ ಆಯೋಗ ನ್ಯಾಷನಲಿಸ್ಟ್ ಕಾಂಗ್ರೆಸ್ಸ್ ಪಕ್ಷ-ಶರದ್ಚಂದ್ರ ಪವಾರ್ ಎಂಬ ಹೊಸ ಹೆಸರು ಕೊಟ್ಟಿದೆ.
ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ಸ್ ಪಕ್ಷ ಎಂದು ಘೋಷಿಸಿ ಗೋಡೆ ಗಡಿಯಾರದ ಚಿಹ್ನೆಯನ್ನು ನೀಡಿದೆ.
ಜನರು ಹಿರಿಯ ನಾಯಕನ ಬೆನ್ನಿಗೆ ನಿಲ್ಲುತ್ತಾರೆ ಎಂದು ಶರದ್‌ರ ಆಪ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಆಗಿರುವ ಈ ಬೆಳವಣಿಗೆಯಿಂದ ಪಕ್ಷದ ಜನಪ್ರಿಯತೆಯ ಬಗ್ಗೆ ಪ್ರಶ್ನೆ ಎದ್ದಿದ್ದು, ಪ್ರಚಾರ ಮಾಡುವಾಗ ಕೊಂಚ ತೊಂದರೆಯಾಗಬಹುದು ಎನ್ನಲಾಗಿದೆ.