ರಿಯಾದ್: ಧಾರ್ಮಿಕ ಯಾತ್ರೆಯ ನೆಪದಲ್ಲಿ ನಮ್ಮ ದೇಶಕ್ಕೆ ಆಗಮಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ ಹೆಚ್ಚುತ್ತಿದ್ದು, ನಂತರ ಅವರು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ದೇಶಕ್ಕೆ ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಪಾಕ್ಗೆ ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರು ಸೌದಿ ಅರೇಬಿಯಾಕ್ಕೆ ಬರುತ್ತಿರುವುದನ್ನು ಸೌದಿ ಅರೇಬಿಯಾ ಗಂಭೀರವಾಗಿ ಪರಿಗಣಿಸುತ್ತಿದ್ದು ಈ ಕೂಡಲೇ ಈ ಬಗ್ಗೆ ಪಾಕ್ ಕ್ರಮಕೈಗೊಳ್ಳದಿದ್ದರೆ, ನಾವೇ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಾಕ್ಗೆ ಹೇಳಿದೆ.
ಇದರಿಂದ ಪಾಕಿಸ್ತಾನ ಮುಜುಗರಕ್ಕೆ ಈಡಾಗಿದ್ದು, ಧಾರ್ಮಿಕ ಹೆಸರಿನಲ್ಲಿ ಬರುತ್ತಿರುವ ಪಾಕಿಸ್ತಾನಿಗಳಿಗೆ ವೀಸಾ ನೀಡಬಾರದು ಎಂದು ಇಸ್ಲಾಮಾಬಾದ್ನ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಸೌದಿ ಹಜ್ ಸಚಿವಾಲಯವು ಔಪಚಾರಿಕವಾಗಿ ಸೂಚನೆ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.