ಪಾಕ್ ಪರ ಘೋಷಣೆ ಕೂಗಿದ್ದು FSL ವರದಿಯಲ್ಲಿ ದೃಢ: ಮೂವರ ಬಂಧನ-ಗೃಹ ಸಚಿವ ಡಾ.ಜಿ.ಪರಮೇಶ್ವರ್. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್




kannada t-shirts

ಬೆಂಗಳೂರು,ಮಾರ್ಚ್,5,2024(www.justkannada.in): ವಿಧಾನಸೌಧ ಆವರಣದಲ್ಲಿ  ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಎಫ್ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದ್ದು, ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ನಾವು ಎಫ್ ಎಸ್ ಎಲ್  ವರದಿ ಬರಲಿ ಎಂದು ಹೇಳಿದ್ವಿ. ಎಫ್ ಎಸ್ ಎಲ್ ವರದಿ ಆಧರಿಸಿ  ಕ್ರಮ ಕೈಗೊಡಿದ್ದೇವೆ. ಪಾಕಿಸ್ತಾನ್ ಜಿಂದಾಬಾದ್  ಎಂದು ಘೋಷಣೆ ಕೂಗಿದ್ದು ದೃಢಪಟ್ಟಿದೆ.  ಹೀಗಾಗಿ  ಎಫ್ ಎಸ್ ಎಲ್ ವರದಿ ಆಧರಿಸಿ ಮೂವರನ್ನ ಬಂಧಿಸಲಾಗಿದೆ. ವರದಿಯಲ್ಲಿ ಯಾರು ಘೋಷಣೆ ಕೂಗಿದ್ದಾರೆಂದು ಹೇಳಿಲ್ಲ. ಯಾಕೆ ಕೂಗಿದ್ದಾರೆಂದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸರ್ಕಾರಕ್ಕೆ ಮುಜುಗರ ಆಗೋ ಪ್ರಶ್ನೆ ಏನಿದೆ.  ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳ ಲೋಪ ಇದ್ರೆ ಕ್ರಮ ಖಚಿತ ಎಂದರು.

ವಿರೋಧ ಪಕ್ಷದವರು ಸುಮ್ಮನೆ ಹೇಳುತ್ತಾರೆ. ಅವರು ಹೇಳ್ತಾರೆ ಎಂದು ಅರೆಸ್ಟ್ ಮಾಡೋಕೆ ಆಗುತ್ತಾ..?  ನಾವು ಎಫ್ ಎಸ್ ಎಲ್ ವರದಿ ಬರಲಿ ಅಂತಾ ಕಾಯುತ್ತಿದ್ದವು. ಈಗ ಬಂದಿದೆ. ಕ್ರಮಕೈಗೊಂಡಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

Key words: Pro-Pak- sloganeering -confirmed – FSL- report-Home Minister- Dr. G. Parameshwar.

website developers in mysore






Previous articleರಸ್ತೆ ಅಪಘಾತ: ಸ್ಥಳದಲ್ಲೇ ಐವರು ಸಾವು.


Font Awesome Icons

Leave a Reply

Your email address will not be published. Required fields are marked *