ಬೆಂಗಳೂರು: ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಸಮಯದಲ್ಲಿ ನಡೆದ ೫೪೫ ಪಿಎಸ್ಐ ನೇಮಕಾತಿ ಅಕ್ರಮದ ಕುರಿತಾದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಸಲ್ಲಿಸಲಾಯಿತು. ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ಅಕ್ರಮದ ವಿಚಾರಣೆ ನಡೆದಿತ್ತು.
೨೦೨೩ರ ಅಕ್ಟೋಬರ್ ನಲ್ಲಿ ನಡೆದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಸಿಐಡಿ ಪೋಲೀಸರಿಂದ ನಡೆದ ತನಿಖೆಯಲ್ಲಿ ೧೧೦ ಜನ ಬಂಧನವಾಗಿತ್ತು.
ನಂತರ ೨೦೨೩ರ ಮೇ ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹಗರಣದ ವಿಚಾರಣೆಗೆ ನ್ಯಾ. ಬಿ. ವೀರಪ್ಪ ನೇತೃತ್ವದ ಆಯೋಗ ನೇಮಿಸಲಾಗಿದ್ದು, ವಿಸ್ತೃತ ವಿಚಾರಣೆಯ ನಂತರ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.