ನಿವಾರ ನಡೆದ ಮಹಿಳೆಯರ 100 ಮೀಟರ್ ಓಟದಲ್ಲಿ ಅಮೆರಿಕಾದ “ಶಾ ಕ್ಯಾರಿ ರಿಚರ್ಡ್ಸನ್” ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು.
ಆದರೆ ಪುಟ್ಟ ದೇಶವಾಗಿರುವ ಸೇಂಟ್ ಲೂಸಿಯಾದ “ಜೂಲಿಯನ್ ಆಲ್ಫ್ರೆಡ್” ಅಮೆರಿಕಾದ ಆಟಗಾರ್ತಿಯ ನಿರೀಕ್ಷೆ ಹುಸಿಗೊಳಿಸಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 1,80,000 ಜನ ಸಂಖ್ಯೆ ಹೊಂದಿರುವ ಸೇಂಟ್ ಲೂಸಿಯಾ ಕೆರಿಬಿಯನ್‌ನಲ್ಲಿರುವ ಒಂದು ಸಣ್ಣ ದೇಶವಾಗಿದೆ. ಉತ್ತರ ಅಮೆರಿಕಾ ಖಂಡದ ಈ ಪೂರ್ವ ಕೆರಿಬಿಯನ್ ದೇಶವು ತುಂಬಾ ಚಿಕ್ಕದಾಗಿದೆ.ಈ ದೇಶ ಈ ಹಿಂದೆ ಪದಕ ಗೆಲ್ಲುವುದಿರಲಿ ಯಾವುದೇ ಕ್ರೀಡಾಪಟು ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಜೂಲಿಯನ್ ಆಲ್ಫ್ರೆಡ್ ಚಿನ್ನದ ಪದಕ ಗೆಲ್ಲುವ ಮೂಲಕ ಈ ಬರವನ್ನು ಕೊನೆಗೊಳಿಸಿದ್ದಾರೆ.
23 ವರ್ಷ ವಯಸ್ಸಿನ ಜೂಲಿಯನ್ ಆಲ್ಫ್ರೆಡ್ ಕಷ್ಟಕರವಾದ ಬಾಲ್ಯವನ್ನು ಎದುರಿಸಿದ್ದಾರೆ. ಅವರು 12 ವರ್ಷದವರಾಗಿದ್ದಾಗ ಅವರ ತಂದೆ ಜೂಲಿಯನ್ ಹ್ಯಾಮಿಲ್ಟನ್ ನಿಧನರಾದರು. ಬಳಿಕ ಜೂಲಿಯನ್ ಅವರ ಚಿಕ್ಕಮ್ಮ ಕರೆನ್ ಆಲ್ಫ್ರೆಡ್ ಅವರ ಆಶ್ರಯದಲ್ಲಿ ಬೆಳೆಸಿದರು. ನಂತರ ಉಸೇನ್ ಬೋಲ್ಟ್ ಅವರ ದೇಶವಾದ ಜಮೈಕಾದಲ್ಲಿ ಓದುವ ಅವಕಾಶ ಸಿಕ್ಕಿತು. ಆದರೆ 2018ರಲ್ಲಿ ಅವರು ಬ್ಯೂನಸ್ ಐರಿಸ್‌ನಲ್ಲಿ ಯೂತ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾಗ ಅವರ ಚಿಕ್ಕಮ್ಮ ಕೂಡ ನಿಧನರಾದರು.
ಜೂಲಿಯನ್ ಆಲ್ಫ್ರೆಡ್ ಮಹಿಳೆಯರ 100 ಮೀಟರ್ ಚಿನ್ನದ ಪದಕ ಗೆದ್ದ ನಂತರ ಸೇಂಟ್ ಲೂಸಿಯಾ ಒಲಿಂಪಿಕ್ ಪದಕ ಪಟ್ಟಿಯಲ್ಲಿ 33ನೇ ಸ್ಥಾನಕ್ಕೇರಿತು. ಆದರೆ 1.2 ಶತಕೋಟಿ ಜನಸಂಖ್ಯೆ ಹೊಂದಿರುವ ದೇಶವಾದ ಭಾರತ ಪ್ರಸ್ತುತ ಮೂರು ಕಂಚಿನ ಪದಕಗಳೊಂದಿಗೆ 54ನೇ ಸ್ಥಾನದಲ್ಲಿದೆ. ಇದರ ಹೊರತಾಗಿ ಸೇಂಟ್ ಲೂಸಿಯಾ ಕೆಳಗೆ ಭಾರತ ಮಾತ್ರವಲ್ಲದೆ ಡೆನ್ಮಾರ್ಕ್ (49) ಮತ್ತು ಪೋಲೆಂಡ್ (45) ಯುರೋಪಿಯನ್ ರಾಷ್ಟ್ರಗಳನ್ನು ಹಿಮ್ಮೆಟ್ಟಿದೆ.