ಮಂಗಳೂರು: ರಾಷ್ಟ್ರಕೂಟ ಪಿಚರ್ಸ್ ಲಾಂಛನದಲ್ಲಿ ವಿ ರವಿ ಕುಮಾರ್ ನಿರ್ಮಾಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಪುರುಷೋತ್ತಮನ ಪ್ರಸಂಗ ಸಿನಿಮಾ ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು.
ಭುಜಬಲಿ ಧರ್ಮಸ್ಥಳ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ದೇವದಾಸ್ ಕಾಪಿಕಾಡ್ ತುಳು ನಾಟಕ ಮತ್ತು ತುಳು ಸಿನಿಮಾಗಳ ಮೂಲಕ ಅದ್ವಿತೀಯ ಸಾಧನೆಗೈದವರು. ಈಗ ಪುರುಷೋತ್ತಮನ ಪ್ರಸಂಗ ಸಿನಿಮಾವನ್ನು ಕನ್ನಡದಲ್ಲಿ ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೂ ಪರಿಚಯವಾಗುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದಾರೆ. ಮತ್ತಷ್ಟು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಲಿ ಎಂದು ಶುಭ ಹಾರೈಸಿದರು.
ವಾರ್ತಾಧಿಕಾರಿ ಖಾದರ್ ಷಾ ಶುಭ ಹಾರೈಸಿದರು. ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಕಾಪಿಕಾಡ್ ತುಳು ಸಿನಿಮಾರಂಗದಲ್ಲಿ ಅನೇಕ ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಈಗ ಕನ್ನಡದಲ್ಲಿ ನಿರ್ದೇಶನ ಮಾಡಿದ ಸಿನಿಮಾ ಸೂಪರ್ ಹಿಟ್ ಆಗಲಿ ಎಂದರು.
ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಕೋಸ್ಟಲ್ ವುಡ್ ನಿಂದ ದೇವದಾಸ್ ಕಾಪಿಕಾಡ್ ಕನ್ನಡ ಚಿತ್ರರಂಗಕ್ಕೆ ಹೋಗಿದ್ದಾರೆ. ಅವರಿಂದ ಒಳ್ಳೆಯ ಸಿನಿಮಾಗಳು ಬರಲಿ. ಪುರುಷೋತ್ತಮನ ಪ್ರಸಂಗ ಒಂದು ಸದಭಿರುಚಿಯ ಒಳ್ಳೆಯ ಸಿನಿಮಾ. ಸಿನಿಮಾ ನೋಡಿ ಎಲ್ಲರೂ ಪ್ರೋತ್ಸಾಹ ನೀಡಿ ಎಂದು ಶುಭ ಹಾರೈಸಿದರು.
ಕಿಶೋರ್ ಕೊಟ್ಟಾರಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಗಿರೀಶ್ ಶೆಟ್ಟಿ, ಸಾಯಿ ಕೃಷ್ಣ ಕುಡ್ಲ, ಮೈಮ್ ರಾಮ್ ದಾಸ್, ಸದಾಶಿವ ಅಮೀನ್, ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್, ನಾಯಕ ನಟ ಅಜಯ್ ಪೃಥ್ವಿ, ನಾಯಕಿ ರಿಷಿಕಾ ನಾಯಕ್, ಜ್ಯೋತಿಷ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ಸಂದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಉತ್ತಮ ಹಾಸ್ಯ ಕಥಾಹಂದರ ಹೊಂದಿರುವ ಈ ಸಿನಿಮಾದ ಮೂಲಕ ಅಜಯ್ ಎಂಬ ನವ ನಟನನ್ನು ಹಾಗೂ ರಿಷಿಕಾ ನಾಯ್ಕ್ ಮತ್ತು ದೀಪಿಕಾ ಎಂಬರನ್ನು ದೇವದಾಸ್ ಕಾಪಿಕಾಡ್ ಕನ್ನಡಕ್ಕೆ ಪರಿಚಯಿಸಿದ್ದಾರೆ.
ಹಾಸ್ಯ ದಿಗ್ಗಜರನ್ನೊಳಗೊಂಡ ತಾರಾಗಣದಲ್ಲಿ ಬಹಳಷ್ಟು ಮಂದಿ ಹೊಸಬರಿಗೂ ಅವಕಾಶ ನೀಡಲಾಗಿದೆ. ಕನ್ನಡದಲ್ಲಿ ನಟನಾಗಿ ಗುರುತಿಸಿ ಹೆಸರು ಗಳಿಸಿರುವ ದೇವದಾಸ್ ಕಾಪಿಕಾಡ್ ಮೊದಲನೇ ಬಾರಿಗೆ ಕನ್ನಡದಲ್ಲಿ ಕತೆ ಚಿತ್ರಕತೆ ಸಾಹಿತ್ಯ ಸಂಭಾಷಣೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಅಲ್ಲದೆ ಒಂದು ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿ ಕೊಂಡಿದ್ದಾರೆ. ಇವರಿಗೆ ನಿರ್ದೇಶನದಲ್ಲಿ ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ.
ನಿರ್ಮಾಪಕರು: ವಿ. ರವಿ ಕುಮಾರ್. ತಾರಾಗಣದಲ್ಲಿ ಅಜಯ್ ನಾಯಕ ನಟ ರಿಷಿಕಾ ನಾಯ್ಕ್ (ನಾಯಕಿ) ದೀಪಿಕಾ (ನಾಯಕಿ) ದೇವದಾಸ್ ಕಾಪಿಕಾಡ್ ನವೀನ್ ಡಿ ಪಡೀಲ್ ಅರವಿಂದ ಬೋಳಾರ್ ಭೋಜರಾಜ ವಾಮಂಜೂರು ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ ಇದ್ದಾರೆ.
ತಾಂತ್ರಿಕ ವರ್ಗ ಸಹ ನಿರ್ದೇಶನ: ಅರ್ಜುನ್ ಕಾಪಿಕಾಡ್ ಸಹಾಯಕ ನಿರ್ದೇಶನ: ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್, ಕ್ಯಾಮರಾ -ವಿಷ್ಣು, ಸಹಾಯ: ಪುಟ್ಟ, ಸಂಗೀತ – ನಕುಲ್ ಅಭಯಂಕರ್, ವಸ್ತ್ರವಿನ್ಯಾಸ – ಶರತ್ ಪೂಜಾರಿ, ಸಹ ನಿರ್ಮಾಪಕರು- ಅಬೂಬಕರ್ ಪುತ್ತಕ, ಲೈನ್ ಪ್ರೊಡ್ಯುಸರ್ – ಸಂದೀಪ್ ಶೆಟ್ಟಿ, ಪ್ರೊಡಕ್ಷನ್ ಟೀಮ್ – ಸಂತೋಷ್, ರಮಾನಂದ, ಮುನ್ನ, ರಾಜೇಶ್.