ಮೈಸೂರು,ಜುಲೈ,28,2024 (www.justkannada.in): ಪೋಲೀಸರ ಮನೆಯಲ್ಲೇ ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿರುವ ಘಟನೆ ಮೈಸೂರಿನ ಜೆಪಿನಗರದ ಎರಡನೇ ಹಂತದಲ್ಲಿ ನಡೆದಿದೆ.
ಕಳ್ಳತನ ಮಾಡುವಾಗಲೂ ಚಾಲಾಕಿ ಕಳ್ಳ ಭಕ್ತಿ ಮೆರೆದಿದ್ದು, ಬಾಗಿಲು ಒಡೆಯೋ ಮುನ್ನ ನಿಂಬೆಹಣ್ಣು ಹಿಡಿದು ನಮಸ್ಕಾರ ಮಾಡಿ ಬಾಗಿಲು ಮುರಿದಿದ್ದಾನೆ. ಕಳ್ಳರ ಕೈಚಳಕ ಸಿಸಿ.ಟಿವಿಯಲ್ಲಿ ಸೆರೆಯಾಗಿದೆ
ತಡರಾತ್ರಿ ಮನೆ ಬೀಗ ಮುರಿದು ಕಳ್ಳರ ಕೈ ಚಳಕ ತೋರಿದ್ದಾರೆ. ಈ ನಡುವೆ ಕಳ್ಳರು ಮನೆಯಲ್ಲಿರುವಾಗಲೇ ಮನೆ ಮಾಲೀಕರು ಮನೆಗೆ ವಾಪಾಸ್ಸಾಗಿದ್ದಾರೆ. ಮನೆ ಮಾಲೀಕರನ್ನು ಕಂಡು ಗಾಬರಿಗೊಂಡ ದರೋಡೆಕೋರರು ಮಾರಾಕಾಸ್ತ್ರ ಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ಈ ವೇಳೆ ಚಾಕು ತೋರಿಸಿ ಕಳ್ಳರು ಎಸ್ಕೇಪ್ ಆಗಿದ್ದು, ಪರಾರಿ ಆಗುವ ವೇಳೆ ಕಳ್ಳತನಕ್ಕೆ ಬಳಸಿದ ಕಬ್ಬಿಣದ ರಾಡ್, ಸಲಾಕೆ, ಎಲೆಕ್ಟ್ರಿಕ್ ಸಾಮಾನು, ಎರಡು ಬ್ಯಾಗ್ ಸೇರಿದಂತೆ ತಮ್ಮ ಲಗೇಜ್ ಗಳನ್ನೇ ಬಿಟ್ಟು ಓಡಿ ಹೋಗಿದ್ದಾರೆ.
ಬಳಿಕ ಮನೆ ಮಾಲೀಕರು ಮನೆಯೊಳಗೆ ತೆರಳಿ ನೊಡಿದಾಗ 135 ಗ್ರಾಂಗೂ ಅಧಿಕ ಚಿನ್ನಾಭರಣ ದೋಚಿರುವುದು ಖಚಿತವಾಗಿದೆ. ಒಟ್ಟು 7 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು ಕಳ್ಳರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Key words: Robbery, house, mysore, thief, Devoted