ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್: ಪ್ರೊ. ರವಿವರ್ಮ ಕುಮಾರ್ ನೇಮಿಸಿ ಸರ್ಕಾರ ಆದೇಶ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಮೇ,20,2024 (www.justkannada.in):  ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರನ್ನ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಿಐಡಿ ಕೆ ಆರ್ ನಗರ ಹೊಳೆನರಸೀಪುರದಲ್ಲಿ ಪ್ರಜ್ವಲ್ ವಿರುದ್ಧ ಎಫ್‌ ಐಆರ್ ದಾಖಲಾಗಿವೆ. ಪ್ರಕರಣ ಸಂಬಂಧ ಈವರೆಗೆ ಎಸ್ ಪಿಪಿ ಆಗಿ ಮೂವರನ್ನು ಸರ್ಕಾರ ನೇಮಿಸಿತ್ತು. ಇದೀಗ ಹೈಕೋರ್ಟ್ ನಲ್ಲಿ ವಾದಿಸಲೆಂದೇ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದೆ.

ಪ್ರಕರಣಗಳಳ್ಲಿ ಪ್ರಜ್ವಲ್ ರೇವಣ್ಣ ಹಾಗೂ ಎಚ್ ಡಿ ರೇವಣ್ಣ ಆರೋಪಿಯಾಗಿದ್ದಾರೆ.  ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಹೆಚ್.ಡಿ ರೇವಣ್ಣ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಇನ್ನು ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದು ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದೆ.

Key words: Prajwal Revanna, Pen Drive, Ravi Varma Kumar

Previous articleಕಡಿಮೆ ಅವಧಿಯಲ್ಲಿ ಅಪೂರ್ವ ಸಾಧನೆ- ಸಿದ್ದರಾಮಯ್ಯ ಸರ್ಕಾರ ಕೊಂಡಾಡಿದ ಸುರ್ಜೇವಾಲ.

Font Awesome Icons

Leave a Reply

Your email address will not be published. Required fields are marked *