ಮಧ್ಯಪ್ರದೇಶ: ಪ್ರೀತಿಸಿ ಮದುವೆಯಾಗಿದ್ದ ಅಧಿಕಾರಿ ಹೆಂಡತಿಯನ್ನ ಪತಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮೃತ ಮಹಿಳೆ ನಿಶಾ ನಾಪಿಥ್ ಮಹಿಳಾ ಸರ್ಕಾರಿ ಅಧಿಕಾರಿ. ಕೊಲೆ ಮಾಡಿದ ಪತಿ ನಿರುದ್ಯೋಗಿಯಾಗಿದ್ದ. ನಿಶಾ ಹಾಗೂ ಮನಿಷ್ ಇಬ್ಬರು ಆನ್ಲೈನ್ ವೆಬ್ಸೈಟ್ನಲ್ಲಿ ಪರಿಚಯವಾಗಿದ್ದು, 2020ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಶುರುವಿನಲ್ಲಿ ಚೆನ್ನಾಗಿದ್ದ ಜೋಡಿ ಮಧ್ಯೆ ಕಾಲ ಕ್ರಮೇಣ ಬಿರುಕು ಉಂಟಾಗಿದೆ.
ಮಧ್ಯಪ್ರದೇಶದ ಶಹಾಪುರದಲ್ಲಿ ಉಪವಿಭಾಗೀಯ ಅಧೀಕ್ಷಕಿಯಾಗಿದ್ದ ನಿಶಾ ಕೈ ತುಂಬಾ ಸಂಬಳ ಪಡೀತಾ ಇದ್ದರು. ಮನಿಷ್ ನಿರುದ್ಯೋಗಿ ಆಗಿದ್ದ ಕಾರಣ.. ನಿಷಾ ತನ್ನ ವಿಮೆ, ಬ್ಯಾಂಕ್ ಖಾತೆ ಯಾವುದ್ರಲ್ಲೂ ಮನಿಷ್ ಹೆಸರನ್ನ ನಾಮಿನಿಯಾಗಿ ಉಲ್ಲೇಖ ಮಾಡಿರ್ಲಿಲ್ಲ.. ಹೀಗಾಗಿಯೇ, ಸಿಟ್ಟಿಗೆದ್ದ ಪಾಪಿ ಪತಿ ಪತ್ನಿಯನ್ನು ಕೊಂದಿದ್ದಾನೆ.
ತಾನು ಮಾಡಿದ ಕೊಲೆಯನ್ನ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಪತಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.