ಪ್ಲಾಸ್ಟಿಕ್ ಬಾಟಲ್​​ಗಳಲ್ಲಿ ಅರಳಿದ ನಮ್ಮ ಸಂವಿಧಾನ

ತುಮಕೂರು: ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನ ನಡೆಸಲಾಗುತ್ತಿದೆ. ತುಮಕೂರು ಜಿಲ್ಲೆಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಿರುಪಯುಕ್ತವಾಗಿ ಇದ್ದಂತಹ 1 ಲಕ್ಷದ 35, ಸಾವಿರದ ಖಾಲಿ ಪ್ಲಾಸ್ಟಿಕ್ ಬಾಟಲುಗಳನ್ನು ಸಂಗ್ರಹಿಸಿ ಅವುಗಳಿಂದ ವಿಶೇಷವಾಗಿ ನಮ್ಮ ಸಂವಿಧಾನ ಎಂಬ ಪದವನ್ನು ಕನ್ನಡದ ವರ್ಣ ಮಾಲೆ ಅಕ್ಷರಗಳಲ್ಲಿ ಜೋಡಿಸಲಾಗಿದೆ.

ಈ ಒಂದು ಪ್ಲಾಸ್ಟಿಕ್ ಬಾಟಲುಗಳಿಂದ ನಮ್ಮ ಸಂವಿಧಾನ ಎಂಬ ವಿಶೇಷ ಆಕೃತಿಯನ್ನು ಕನ್ನಡ ವರ್ಣಮಾಲೆಯಲ್ಲಿ ರಚಿಸಲು 305 ವಿದ್ಯಾರ್ಥಿಗಳು ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಕೈ ಜೋಡಿಸಿದ್ದಾರೆ. ಜಿಲ್ಲಾಡಳಿತದ ಈ ವಿನೂತನವಾದ ಪ್ರಯೋಗವನ್ನು ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Font Awesome Icons

Leave a Reply

Your email address will not be published. Required fields are marked *