ಬೆಂಗಳೂರು : ಹೇಮಾ ವರದಿ ಮಾಲಿವುಡ್‌ನಲ್ಲಿ ಸುನಾಮಿ ಎಬ್ಬಿಸಿದೆ. ಕೇರಳದಲ್ಲಿ ಎದ್ದಿರೋ ಈ ಸುನಾಮಿ ಈಗ ಸ್ಯಾಂಡಲ್ವುಡ್ಗೂ ಬಂದಪ್ಪಳಿಸಿದ್ದು, ಫಿಲ್ಮ್ ಚೇಂಬರ್‌ನಲ್ಲಿ ನಾಳೆ (ಸೆ.16) ಮಹತ್ವ ಸಭೆ ನಡೆಯಲಿದೆ. ಚಿತ್ರರಂಗದ ಸಮಸ್ಯೆ ವಿಚಾರವಾಗಿ ಫಿಲ್ಮ್ ಚೇಂಬರ್‌ಗೆ ಮಹಿಳಾ ಅಯೋಗದ ಪತ್ರದ ಬೆನ್ನಲ್ಲೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಗೆ ಮುಂದಾಗಿದೆ. ಹಾಗಾಗಿ ಕಲಾವಿದರ ಸಂಘಕ್ಕೆ ಪತ್ರ ಬರೆದು ನಾಳಿನ ಸಭೆ ಬಗ್ಗೆ ಫಿಲ್ಮ್ ಚೇಂಬರ್ ನಟಿಯರಿಗೆ ಮಾಹಿತಿ ನೀಡಿದೆ.
ನಾಳೆ 11 ಗಂಟೆಗೆ ಫಿಲ್ಮ್ ಚೇಂಬರ್‌ನಲ್ಲಿ ಸಭೆ ನಡೆಯಲಿದ್ದು, ಮಹಿಳಾ ಅಯೋಗದ ಅಧ್ಯಕ್ಷೆ ಆಗಮಿಸುತ್ತಾರೆ. ಚೇಂಬರ್ ಸಭೆಗೆ ಫೈರ್ ಸದಸ್ಯರ ಹೊರತು ಪಡಿಸಿ ಯಾವೆಲ್ಲ ನಟಿಯರು ಭಾಗವಹಿಸ್ತಾರೆ ಕಾದು ನೋಡಬೇಕಿದೆ. ಹೇಮಾ ಕಮಿಟಿ ಮಾದರಿಗೆ ಈಗಾಗಲೇ ಚಿತ್ರರಂಗದಲ್ಲಿ ಪರ ವಿರೋಧ ಚರ್ಚೆಗಳಾಗಿದ್ದು, ಕಮಿಟಿ ರಚನೆಗೆ ಸ್ಟಾರ್ ಹಾಗೂ ಹಿರಿಯ ನಟ ನಟಿಯರ ವಿರೋಧ ವ್ಯಕ್ತವಾಗಿದೆ.
ಹೇಮಾ ವರಧಿ ಬಂದ ಮೇಲೆ ಮಲೆಯಾಳಂ ಸಿನಿಮಾ ಜಗತ್ತಿನ ಕಾಮುಖ ಕಣ್ಣುಗಳ ಕರಾಳ ಕತೆಗಳು ಬಯಲಾಗ್ತಿವೆ. ಹಾಗೆ ನಮ್ಮ ಸ್ಯಾಂಡಲ್ವುಡ್ಅನ್ನ ಕಾಮುಕ ಕಣ್ಣುಗಳನ್ನ ಕ್ಲೀನ್ ಮಾಡೋಕೆ ಸರ್ಕಾರ ಹೊಸ ಹೆಜ್ಜೆ ಇಟ್ರು ಆಶ್ಚರ್ಯವೇನಿಲ್ಲ. ಅಷ್ಟರೊಗಳಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗು ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ಮಹಿಳಾ ಆಯೋಗ ಪತ್ರ ಬರೆದಿದೆ. ಚಿತ್ರರಂಗದ ನಟಿಯರನ್ನು ಕರೆದು ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಮಿತಿ ರಚಿಸಲು ಒತ್ತಾಯಿಸಿ ತೀರ್ಮಾನ ತೆಗೆದುಕೊಳ್ಳಿ ಈ ಸಭೆ ಸೆಪ್ಟೆಂಬರ್ 13ರ ಒಳಗೆ ನಡೆಸುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯಿಂದ ಪತ್ರ ಬರೆದಿದ್ದಾರೆ.