ಜನಪ್ರಿಯ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ.
ಹೌದು..ಇಂದು ರಾತ್ರಿ 9ರ ಸುಮಾರಿಗೆ ಏಕಾಏಕಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಏಕಾಏಕಿ ತನ್ನಷ್ಟಕ್ಕೆ ತಾನೇ ಲಾಗೌಟ್ ಆಗಿವೆ. ಇದರಿಂದ ಬಳಕೆದಾರರು ಕಂಗಲಾಗಿದ್ದಾರೆ. ಇನ್ನು ಫೇಸ್ಬುಕ್ ಪಾಸ್ವರ್ಡ್ ಮರೆತವರು ಪುನಃ ಲಾಗಿನ್ ಆಗುವುದಕ್ಕೆ ಪರದಾಡುವಂತಾಗಿದೆ.
ಫೇಸ್ ಬುಕ್ ಒಂದು ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿದ್ದು, ಈ ವೇದಿಕೆಯಲ್ಲಿ ವಿಶ್ವದಾದ್ಯಂತ ಬಿಲಿಯನ್ ಗಟ್ಟಲೇ ಬಳಕೆದಾರರಿದ್ದಾರೆ. ಹಾಗೇ ಪ್ರತಿದಿನ ಸಾವಿರಾಕ್ಕೂ ಅಧಿಕ ಮಂದಿ ಸೇರ್ಪಡೆಗೊಂಡು ಸೈನ್ ಇನ್ ಆಗುತ್ತಾರೆ. ಆದರೆ ಈಗ ಪರದಾಡುವಂತಾಗಿದೆ.
ಫೇಸ್ಬುಕ್, ಇನ್ಸ್ಟಾಗ್ರಾಮ್ ಲಾಗ್ ಔಟ್ ಆಗಿರೋದು ಯಾರೋ ಒಬ್ಬರದಲ್ಲ. ವಿಶ್ವದಾದ್ಯಂತ ಎಲ್ಲರ ಅಕೌಂಟ್ಗಳು ಇಂದು ದಿಢೀರನೇ ಸಮಸ್ಯೆಗೆ ಸಿಲುಕಿದೆ. ಇದಕ್ಕೆ ಜಾಗತಿಕವಾಗಿ ಫೇಸ್ಬುಕ್ ಸರ್ವರ್ ಡೌನ್ ಆಗಿರೋದೇ ಕಾರಣ ಎನ್ನಲಾಗಿದೆ.