ಮುಂಬೈ: ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ನಟನೆಯ ಫೈಟರ್ ಚಿತ್ರ ಫಿಲ್ಮ್ ಬಿಸ್ನೆಸ್ ತಜ್ಞ ಮತ್ತು ನಿರ್ಮಾಪಕರಾದ ಗಿರೀಶ್ ಜೋಹಾರ್ ಪ್ರಕಾರ ಸದ್ಯ ಯುಎಇ ಹೊರತುಪಡಿಸಿ ಇತರೆ ಗಲ್ಫ್ ದೇಶಗಳಲ್ಲಿ ಬಿಡುಗಡೆಗೆ ಸಿನಿಮಾಕ್ಕೆ ಅನುಮತಿ ದೊರಕಿಲ್ಲ. ಈ ಚಿತ್ರದ ಎರಡು ದೃಶ್ಯಗಳಿಗೆ ಕತ್ತರಿ ಹಾಾಕುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.
ಹೋದಬಾರಿ ಶಾರೂಖ್ ಜೊತೆ ನಟಿಸಿದ್ದ ಸಿನಿಮಾದಲ್ಲಿ ನಟಿ ದೀಪಿಕಾ ಕೇಸರಿ ಬಿಕಿನಿ ಹಾಕಿ, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ಪಠಾಣ್ ಸಿನಿಮಾದಲ್ಲಿ ದೀಪಿಕಾಳ ಬಿಕಿನಿ ಲುಕ್ ಕತ್ತರಿಸಲಾಾಗಿತ್ತು. ಇದರಲ್ಲೂ ದೀಪಿಕಾ ಬಿಕಿನಿ ದೃಶ್ಯವನ್ನು ಕಟ್ ಮಾಡುವಂತೆ ಸೆನ್ಸಾರ್ ಸೂಚಿಸಿದೆ.
ಫೈಟರ್ ಸಿನಿಮಾದಲ್ಲಿ ನಟಿಸಿರುವ ಕಲಾವಿದರ ಸಂಭಾವನೆಗೆ ಸದ್ದು ಮಾಡುತ್ತಿದೆ. ಇದರಲ್ಲಿ ಹೃತಿಕ್ ಮತ್ತು ದೀಪಿಕಾ ಕೋಟಿ ಕೋಟಿ ಸಂಭಾಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇವರ ಸಂಭಾವನೆಯಿಂದಲೇ ಚಿತ್ರದ ಬಜೆಟ್ ಮಿತಿ ಮೀರಿದೆ ಎಂದು, ಫೈಟರ್ ಚಿತ್ರದ ನಿರ್ಮಾಪಕ ಕಮಾಲ್ ಖಾನ್ ಟ್ವೀಟ್ ಮಾಡಿದ್ದರು.
ನಿರ್ದೇಶಕ ಸಿದ್ಧಾರ್ಥ್ ಆನಂದ್ 40 ಕೋಟಿ ಸಂಭಾವನೆ ಪಡೆದಿದ್ದಾರೆ. ಹೃತಿಕ್ 85 ಕೋಟಿಯಾದರೆ, ದೀಪಿಕಾ 20 ಕೋಟಿ ಸಂಭಾವನೆ ಪಡೆದಿದ್ದಾರೆ. ಉಳಿದ ಕಲಾವಿದರಿಗೆ 15 ಕೋಟಿ ಕೊಡಲಾಗಿದೆ. ಚಿತ್ರದ ಬಜೆಟ್ 350 ಕೋಟಿಯಾದರೆ, ಕಲಾವಿದರಿಗೆ ಕೊಡುವ ಸಂಭಾವನೆ 160 ಕೋಟಿ ಮೀರಿದೆ.