ಫ್ರಾನ್ಸ್: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇಂದು ದೇಶದ ಶಿಕ್ಷಣ ಸಚಿವ ಗೇಬ್ರಿಯಲ್ ಅಟಲ್ ಅವರನ್ನ ಪಿಎಂ ಸ್ಥಾನಕ್ಕೆ ಹೆಸರಿಸಿದ್ದಾರೆ. ಇದರೊಂದಿಗೆ 34 ವರ್ಷದ ಗೇಬ್ರಿಯಲ್ ಅಟಲ್ ಕಿರಿಯ ಹಾಗೂ ಮೊದಲ ಬಾರಿಗೆ ಸಲಿಂಗಕಾಮಿಯೊಬ್ಬರು ದೇಶದ ಪ್ರಧಾನಿಯಾದತ್ತಾಂಗಿದೆ.
ಇಂದು ಬೆಳಿಗ್ಗೆ ಎಲಿಜಬೆತ್ ಬೋರ್ನ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಇವರ ಸ್ಥಾನಕ್ಕೆ ಗೇಬ್ರಿಯಲ್ ಅಟಲ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಫ್ರಾನ್ಸ್ನ ಅಧ್ಯಕ್ಷರ ಸಚಿವಾಲಯವು ತಿಳಿಸಿದೆ. ಫ್ರಾನ್ಸ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಗೇಬ್ರಿಯಲ್ ಅಟಲ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಸೂಚಿಸಿದರು. ಅದರಂತೆ ಅವರನ್ನು ನೇಮಕ ಮಾಡಲಾಗಿದೆ.