ಗುಂಡ್ಲುಪೇಟೆ: ಕರ್ನಾಟಕ ಅರಣ್ಯ ಇಲಾಖೆ ಮತ್ತು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಯುನೈಟೆಡ್ ಕನ್ಸರ್ವೇಶನ್ ಮೂವ್ಮೆಂಟ್ ಸ್ಥಳೀಯ ಸಮುದಾಯಗಳ ಜನರಿಗೆ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಗ್ನಿಶಾಮಕ ತರಬೇತಿ ಕಾರ್ಯಾಗಾರವನ್ನು ನಡೆಸಿತು.
ಬಂಡೀಪುರ ಹುಲಿ ರಕ್ಷಿತಾರಣ್ಯ ಕ್ಷೇತ್ರ ನಿರ್ದೇಶಕ ಡಾ.ರಮೇಶ್ ಕುಮಾರ್ ಹಾಗೂ ಜಿಲ್ಲಾ ಅರಣ್ಯಾಧಿಕಾರಿ ಕಾಡ್ಗಿಚ್ಚಿನ ಅನಾಹುತದ ಕುರಿತು ಮಾತನಾಡಿ, ಅರಣ್ಯ, ವನ್ಯಜೀವಿ ಮತ್ತು ಜೀವ ವೈವಿಧ್ಯವನ್ನು ಉಳಿಸುವಲ್ಲಿ ಸ್ಥಳೀಯ ಜನರು ಇಲಾಖೆಗೆ ನೆರವು ನೀಡುವಂತೆ ಕರೆ ನೀಡಿದರು.