ಬೆಂಗಳೂರು,ಫೆಬ್ರವರಿ,8,2024(www.justkannada.in): ವಿರೋಧ ಪಕ್ಷದವರು ಗ್ಯಾರಂಟಿ ಬಗ್ಗೆ ಆರೋಪಿಸಿದರು. ಆದರೆ ಬಡವರ ಪರವಾದ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಂದು ವಿಧಾನಸೌಧದಲ್ಲಿ ಜನತಾದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳೆದ ಬಾರಿಯೂ 5 ಸಾವಿರ ಅರ್ಜಿ ಬಂದಿದ್ದವು. ಇದರಲ್ಲಿ ಶೇ 98 ರಷ್ಟು ಅರ್ಜಿಗಳಿಗೆ ಪರಿಹಾರ ಸಿಕ್ಕಿದೆ. ಕೇವಲ ಶೇ. 2ರಷ್ಟು ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಉಳಿದ ಅರ್ಜಿಗಳು ಕೆಲವೇ ದಿನಗಳಲ್ಲಿ ಇತ್ಯರ್ಥವಾಗಲಿದೆ ಎಂದರು.
ವಿರೋಧ ಪಕ್ಷದವರು ಗ್ಯಾರಂಟಿ ಬಗ್ಗೆ ಆರೋಪಿಸಿದರು. ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಎಂದರು. ಅವರಿಗೆ ಅಭಿವೃದ್ದಿ ಅಂದ್ರೆ ಏನು ಅಂತಾನೆ ಗೊತ್ತಿಲ್ಲ. ಗ್ಯಾರಂಟಿಯಿಂದ ದಿವಾಳಿಯಾಗುತ್ತೆ ಎಂದರು. ಬಿಜೆಪಿಯವರು ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಬಿಜೆಪಿ ನಾಯಕರು ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಡವರ ಪರವಾದ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಲ್ಲ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: Projects – poor -will not- stop -any reason- CM -Siddaramaiah