ಬಳ್ಳಾರಿ ವಿಮ್ಸ್​​​ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು

ಬಳ್ಳಾರಿ: ಬಳ್ಳಾರಿ ವಿಮ್ಸ್​​​ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ಸಾವನಪ್ಪಿದ್ದಾರೆ. ಈ ಹಿನ್ನಲೆ ಆಸ್ಪತ್ರೆಯ ಮುಂದೆ ಮೃತ ಬಾಣಂತಿ ಸಂಬಂಧಿಕರು ಗಲಾಟೆ ಮಾಡಿದ್ದಾರೆ.

ಮೃತ ಬಾಣಂತಿಯನ್ನು ಮೋಕಾ ಗ್ರಾಮದ ಭಾಗ್ಯ (23) ಎಂದು ಗುರುತಿಸಲಾಗಿದೆ. ಇವರ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಬಳ್ಳಾರಿ ಕೌಲ್ ಬಜಾರ್ ಠಾಣಾ ಪೊಲೀಸ್ರು ಭೇಟಿ ನೀಡಿ ಗಲಾಟೆ ತಿಳಿಗೊಳಿಸೋ ಪ್ರಯತ್ನ ಮಾಡುತ್ತಿದ್ದಾರೆ.

ನಿನ್ನೆ (ಮಾ. 7)ರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೋಕಾ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆ ಹೆರಿಗೆ ಆಗಿದೆ. ಭಾಗ್ಯ ಅವರು ಗಂಡು ಮಗುವಿಗೆ ಜನ್ಮ ನೀಡಿದ್ರು. ಹೆರಿಗೆ ಬಳಿಕ ತೀವ್ರ ರಕ್ತಸ್ರಾವ ಆದ ಕಾರಣ ಮಹಿಳೆ ಪ್ರಾಣ ಬಿಟ್ಟಿದ್ದಾರೆ.

Font Awesome Icons

Leave a Reply

Your email address will not be published. Required fields are marked *