https://www.instagram.com/p/CcS8eyTDMJa/?utm_source=ig_web_button_share_sheet
ಇರಾಕ್: ಈಗಂತು ಹೆಚ್ಚಿನ ಮಹಿಳೆಯರು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಳ್ಳತ್ತಾರೆ. ಅದರಲ್ಲೂ ಹಚ್ಚಿನದಾಗಿ ಸಿನಿಮಾ ನಟಿಯರು ಹೆಚ್ಚು ಸುಂದರ ಕಾಣಬೇಕೆಂಬ ಉದ್ದೇಶದಿಂದ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಿದ್ದರು ಇದರಿಂದ ಕೆಲವರು ಮೊದಲಿಗಿಂತ ಹೆಚ್ಚು ಸುಂದರವಾಗಿ ಬದಲಾದರೇ ಇನ್ನೂ ಕೆಲವರು ಇದ್ದ ಸೌಂದರ್ಯವನ್ನು ಕಳೆದುಕೊಂಡಿದ್ದಾರೆ. ಕೆಲವರು ದೇಹದ ಕೆಲವು ಭಾಗಗಳನ್ನು ಮಾತ್ರ ಸರ್ಜರಿ ಮಾಡಿಕೊಂಡರೆ ಇನ್ನು ಕೆಲವರು ತಮ್ಮ ಇಡೀ ದೇಹವನ್ನೆ ಸರ್ಜರಿ ಮಾಡಿಸುತ್ತಿದ್ದರು.
ಒಬ್ಬ ಮಹಿಳೆ ಬಾರ್ಬಿ ಗೊಂಬೆಯಂತೆ ಸುಂದರವಾಗಿ ಕಾಣಬೇಕೆಂದು ಬಯಸಿ, ಇದಕ್ಕಾಗಿ, ಒಂದಲ್ಲ, ಎರಡಲ್ಲ ಬರೋಬ್ಬರಿ 43 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಪರಿಣಾಮ ಅವಳ ಮುಖ ವಿಚಿತ್ರವಾಗಿ ಕಾಣತೊಡಗಿತು.ಈಕೆ ಇಲ್ಲಿಯ ವರೆಗೆ ತುಟಿ, ಮೂಗು, ಮುಖ ಮತ್ತು ಸ್ತನವನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.
ಇರಾಕ್ನ ಬಾಗ್ದಾದ್ನ ದಾಲಿಯಾ ನಯೀಮ್ ಎಂಬ ಹೆಸರಿನ ಈ ಮಹಿಳೆ ನಿರೂಪಕಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾಳೆ. ಅಲ್ಲದೇ ಈಕೆಗೆ ಇನ್ಸ್ಟಾಗ್ರಾಮ್ ನಲ್ಲಿ 9 ಲಕ್ಷ 96 ಸಾವಿರ ಫಾಲೋವರ್ಸ್ ಇದ್ದಾರೆ. ಈಕೆಯ ಹೊಸ ನೋಟಕ್ಕೆ ಕಮೇಂಟ್ ಗಳು ಕೂಡ ಬಂದಿದ್ದು ಆಕೆಯ ಅಭಿಮಾನಿಗಳು ಅವಳನ್ನು ʻಇರಾಕಿ ಬಾರ್ಬಿʼ ಎಂದು ಕೆರಯುತ್ತಾರೆ.