ಬಾಹುಬಲಿ ನಟ ಪ್ರಭಾಸ್ ಫೇಸ್‌ಬುಕ್ ಅಕೌಂಟ್ ಹ್ಯಾಕ್

ಬಾಹುಬಲಿ ನಟ ಪ್ರಭಾಸ್ ಅವರು ‘ಪ್ರಾಜೆಕ್ಟ್ ಕೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ನಾಗ್ ಅಶ್ವೀನ್, ದೀಪಿಕಾ ಪಡುಕೋಣೆ ಜೊತೆ ‘ಪ್ರಾಜೆಕ್ಟ್ ಕೆʼ ಸಿನಿಮಾದ ಶೂಟಿಂಗ್ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಪ್ರಭಾಸ್ ಅವರ ಅಧಿಕೃತ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ.

ಪ್ರಭಾಸ್ ಇತ್ತೀಚಿಗೆ ನಟಿಸಿರು ಸಿನಿಮಾಗಳು ಸಾಲು ಸಾಲಾಗಿ ಫ್ಲಾಪ್ ಆಗುತ್ತಿದ್ದರು. ಅವರಿಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಪ್ರಶಾಂತ್ ನೀಲ್ ಜೊತೆಗಿನ ಸಲಾರ್, ನಾಗ್ ಅಶ್ವೀನ್ ಜೊತೆ ಪ್ರಾಜೆಕ್ಟ್ ಕೆ, ಕಲ್ಕಿ 2898, ಸೇರಿದಂತೆ ಸಾಕಷ್ಟು ಸಿನಿಮಾಗಳ ಅವಕಾಶವಿದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಪಾರ ಅಭಿಮಾನಿಗಳಿದ್ದಾರೆ.

ಪ್ರಭಾಸ್ ಖಾತೆಯಿಂದ ಅನಿರೀಕ್ಷಿತ ಪೋಸ್ಟ್ ಬಂದಿದ್ದು, ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸ್ವತಃ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿದ್ದಾರೆ. ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ನಟ ತಿಳಿಸಿದ್ದಾರೆ.

 

 

Font Awesome Icons

Leave a Reply

Your email address will not be published. Required fields are marked *