ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಹಿಳೆಯರಿಬ್ಬರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವಂತಹ ಘಟನೆ ಬೆಂಗಳೂರು ಮೆಜೆಸ್ಟಿಕ್ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಸ್ನಲ್ಲಿ ನಡೆದಿದೆ.
ಇದೀಗ ಈ ಇಬ್ಬರು ಮಹಿಳೆಯರ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋಪಗೊಂಡ ಮಹಿಳೆಯರಿಬ್ಬರು ತಮ್ಮ ತಮ್ಮ ಚಪ್ಪಲಿಯಿಂದ ಪರಸ್ಪರಿಗೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಕಿಟಕಿ ಮುಚ್ಚುವಂತೆ ಒಬ್ಬರು ಮಹಿಳೆ ಕೇಳಿಕೊಂಡಿದ್ದಾರೆ. ಇದಕ್ಕೆ ಮತ್ತೊಬ್ಬ ಮಹಿಳೆ ನಿರಾಕರಿಸಿದ್ದಾರೆ. ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಇಬ್ಬರ ಮಧ್ಯೆ ಜಗಳ ನಡೆದಿದೆ. ಸಹ ಪ್ರಯಾಣಿಕರು ಮತ್ತು ಬಸ್ ಕಂಡಕ್ಟರ್ ಅವರನ್ನು ದಾರಿ ಮಧ್ಯದಲ್ಲಿಯೇ ಇಳಿಸುವುದಾಗಿ ಹೇಳಿದರು ಗಲಾಟೆ ನಿಲ್ಲಿಸಿಲ್ಲ ಎನ್ನಲಾಗಿದೆ.
Women slipper each other on bus in Bengaluru!
A verbal argument between two women passengers on a moving BMTC bus, over sliding the window glass, took a serious turn when they started hitting each other with shoes.
(Source: Fwd) pic.twitter.com/ZnLPBReYQZ
— Rakesh Prakash (@rakeshprakash1) February 8, 2024