ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಎಲೆಕ್ಟ್ರಿಕ್ ವಾಹನಗಳನ್ನು ವಿಶ್ವಾದ್ಯಂತ ಬಿಡುಗಡೆ ಮಾಡುತ್ತಿದೆ.
ಇದೀಗ ಭಾರತದಲ್ಲಿ ಮೊದಲ ಬಾರಿಗೆ ತನ್ನ ಬಹುನೀರಿಕ್ಷಿತ ಸಿಇ 04 ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೊಸ ಇವಿ ಸ್ಕೂಟರ್ ಎಕ್ಸ್ ಶೋರೂಂ ಪ್ರಕಾರ ರೂ. 14.90 ಲಕ್ಷ ಬೆಲೆ ಹೊಂದಿದೆ.
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಸಿಇ 04 ಐಷಾರಾಮಿ ಇವಿ ಸ್ಕೂಟರಿನಲ್ಲಿ 8.5 ಕೆವಿಹೆಚ್ ಸಾಮರ್ಥ್ಯದ ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 130 ಕಿ.ಮೀ ಮೈಲೇಜ್ ನೀಡಲಿದೆ.
ಇದರೊಂದಿಗೆ ಹೊಸ ಇವಿ ಸ್ಕೂಟರ್ ಅದ್ಭುತ ಪರ್ಫಾಮೆನ್ಸ್ ಹೊಂದಿದ್ದು, ಇದು ಕೇವಲ 2 ಸೆಕೆಂಡುಗಳಲ್ಲಿ ಸೊನ್ನೆಯಿಂದ 50 ಕಿ.ಮೀ ವೇಗ ಪಡೆದುಕೊಳ್ಳುವುದರ ಜೊತೆಗೆ ಪ್ರತಿ ಗಂಟೆ 120 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು.
ಹೊಸ ಇವಿ ಸ್ಕೂಟರ್ ಖರೀದಿಯೊಂದಿಗೆ ಕಂಪನಿಯ ಕಡೆಯಿಂದ 2.3 ಕೆವಿ ಸಾಮರ್ಥ್ಯದ ಹೋಂ ಚಾರ್ಜರ್ ಸೌಲಭ್ಯ ಸಿಗಲಿದ್ದು, ಇದು ಶೇ. 80 ರಷ್ಟು ಚಾರ್ಜಿಂಗ್ ಮಾಡಲು 3 ಗಂಟೆ 30 ನಿಮಿಷ ಸಮಯಾವಕಾಶ ತೆಗೆದುಕೊಳ್ಳುತ್ತದೆ.
ಹೊಸ ಇವಿ ಸ್ಕೂಟರಿನಲ್ಲಿ ರೈಡಿಂಗ್ ಅನುಭವ ಹೆಚ್ಚಿಸಲು ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಇಕೋ, ರೈನ್ ಮತ್ತು ರೋಡ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ನೀಡಿದ್ದು, ಇದರಲ್ಲಿರುವ ಆಟೋಮ್ಯಾಟಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್ ಸೌಲಭ್ಯವುದು ರೈಡಿಂಗ್ ವೇಳೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.
ಹೊಸ ಇವಿ ಸ್ಕೂಟರಿನಲ್ಲಿ ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್ ಸೌಲಭ್ಯಗಳಿವೆ.
ಕೊನೆಯದಾಗಿ ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಬ್ಲೂಟೂಥ್ ಸಂಪರ್ಕಿತ 10.25 ಇಂಚಿನ ಟಿಎಫ್ ಟಿ ಮಲ್ಟಿ ಫಂಕ್ಷನಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, 12 ವೊಲ್ಟೊ ಸಾಮರ್ಥ್ಯದ ಸ್ಮಾರ್ಟ್ ಫೋನ್ ಚಾರ್ಜರ್ ಸಾಕೆಟ್ ಸೌಲಭ್ಯಗಳಿವೆ.
ಹೊಸ ಸ್ಕೂಟರಿನಲ್ಲಿ ಇನ್ನು ಹೆಚ್ಚಿನ ಐಷಾರಾಮಿ ಫೀಚರ್ಸ್ ಬಯಸುವ ಗ್ರಾಹಕರಿಗೆ ಕಂಫರ್ಟ್ ಮತ್ತು ಡೈನಾಮಿಕ್ ಆಕ್ಸಸರಿಸ್ ಪ್ಯಾಕೇಜ್ ಗಳನ್ನು ಪರಿಚಯಿಸಿದ್ದು, ಇದಲ್ಲದೇ ಹೊಸ ಸ್ಕೂಟರ್ ಖರೀದಿಗಾಗಿ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಮತ್ತು 5 ವರ್ಷಗಳ ವಿಸ್ತರಿತ ವಾರಂಟಿ ಆಯ್ಕೆ ದೊರಲಿದೆ.