ಬೆಂಗಳೂರು: ಪುನಿತ್ ಎಂಬ ಯುವಕನ ಗಾಡಿಗೆ BSP ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡಿನ ಕಾರ್ ಡಿಕ್ಕಿಯಾಗಿದ್ದು, ಆ ಬಗ್ಗೆ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಲಸದ ನಿಮಿತ್ತ ಹೊರಟಿದ್ದ ಪುನಿತ್ ಗಾಡಿಗೆ ಹಲಸೂರು ಕೆರೆ ಬಳಿ ಕಾರ್ ಡಿಕ್ಕಿ ಹೊಡೆಯುತ್ತದೆ. ಬಿಎಸ್‌ಪಿ ಸ್ಟೇಟ್ ಜನರಲ್ ಸೆಕ್ರೆಟರಿ ಬೋರ್ಡ್ ಇದ್ದ ಆ ಕಾರಿನಲ್ಲಿ ಇದ್ದವರ ಬಳಿ ಆ ಬಗ್ಗೆ ಮಾತಾಡಲು ಹೋದಾಗ ಹಲ್ಲೆ ನಡೆಸಲಾಗಿದೆ. ನಂತರ ಕಾರಿನಲ್ಲಿದ್ದವರು ಪರಾರಿಯಾಗಿದ್ದು, ಪುನೀತ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.