ಬಿಗ್‌ ಬಾಸ್‌ ಮನೆಯಿಂದ ಚೈತ್ರಾ ಕುಂದಾಪುರ’ ಹೊರಹಾಕುವಂತೆ ‘ ವಕೀಲ ಭೋಜರಾಜ್’ ನೋಟಿಸ್

ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಭೋಜರಾಜ್ ಎಂಬುವರು ಕಲರ್ಸ್ ಕನ್ನಡ ವಾಹಿನಿಯ ಪ್ರೊಡ್ಯೂಸರ್, ಎಡಿಟರ್ ಅವರಿಗೆ ಇ-ಮೇಲ್ ಮೂಲಕ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ಗಲಾಟೆ, ದೊಂಬಿ, ಜೀವ ಬೆದರಿಕೆ ಹಾಗೂ ವಂಚನೆ ಮೊದಲಾದ ಪ್ರಕರಣಗಳು ದಾಖಲಾಗಿದ್ದಾವೆ. ಅವರು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದಾರೆ. ಇಂತಹವರನ್ನು ಬಿಗ್ ಬಾಸ್ ಕನ್ನಡ 11ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವುದು ಸರಿಯಲ್ಲ ಎಂಬುದಾಗಿ ತಿಳಿಸಿದ್ದಾರೆ.

ಲೀಗಲ್ ನೋಟಿಸ್ ನಲ್ಲಿ ಏನಿದೆ.?

ಕಲರ್ಸ್ ಕನ್ನಡ ವಾಹಿನಿಯಲ್ಲಿ 29-ಸೆಪ್ಟೆಂಬರ್-2024 ರಂದು ಪ್ರಸಾರವಾಗಬೇಕಿದ್ದ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ಈಗಾಗಲೇ ಪ್ರಸಾರವಾಗಿದೆ. ಇದರಲ್ಲಿ, 17 ಸ್ಪರ್ಧಿಗಳ ಹೆಸರನ್ನು 29-ಸೆಪ್ಟೆಂಬರ್ 2024 ರಂದು ಘೋಷಿಸಲಾಯಿತು ಮತ್ತು ಸ್ಪರ್ಧಿಗಳನ್ನು ಕನ್ನಡದ ಪ್ರಸಿದ್ಧ ನಟ ಸುದೀಪ್ ಸಾರ್ವಜನಿಕರಿಗೆ ಪರಿಚಯಿಸಿದರು.

ಈ 17 ಸ್ಪರ್ಧಿಗಳಲ್ಲಿ, ಕ್ರಿಮಿನಲ್ ಹಿನ್ನೆಲೆಯ ಚೈತ್ರಾ ಕುಂದಾಪುರ ಅವರನ್ನು ಸಹ ಸ್ಪರ್ಧಿಯಾಗಿ ಘೋಷಿಸಲಾಗಿದ್ದು, ಇದು ಲಕ್ಷಾಂತರ ಕನ್ನಡ ಬಿಗ್ ಬಾಸ್ ಸೀಸನ್ 11 ವೀಕ್ಷಕರು ಮತ್ತು ಸಾರ್ವಜನಿಕರಿಗೆ ಆಘಾತಕಾರಿ ವಿಚಾರವಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಅವರನ್ನು ‘ಹಿಂದೂ ಫೈರ್ ಬ್ರಾಂಡ್’ ಎಂದು ನಟ ಸುದೀಪ್ ಹೊಗಳಿದ್ದಾರೆ.

ತಮ್ಮ ಕುಟುಂಬವನ್ನು ಶ್ಲಾಘಿಸಿದ ಚೈತ್ರಾ, “ಬಿಗ್ ಬಾಸ್ ಸೀಸನ್ 10 ರ ಪ್ರಸಾರದ ಸಮಯದಲ್ಲಿ ನಾನು ಜೈಲಿನಲ್ಲಿದ್ದೆ ಮತ್ತು ಅದನ್ನು ಜೈಲಿನಲ್ಲಿಯೇ ನೋಡಿದೆ” ಎಂದು ಹೇಳಿದರು. ಈ ಹೇಳಿಕೆ ಪ್ರೇಕ್ಷಕರಿಗೆ ಮುಜುಗರವನ್ನುಂಟು ಮಾಡಿದೆ.

ಚೈತ್ರಾ ಕುಂದಾಪುರ ವಿರುದ್ಧ ಈಗಾಗಲೇ ಸುಮಾರು 11 ಪ್ರಕರಣಗಳು ದಾಖಲಾಗಿವೆ ಎಂಬುದು ನಿಮ್ಮ ಗಮನಕ್ಕೆ ಬಂದಿದ್ದರೂ, ಅವುಗಳನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

Font Awesome Icons

Leave a Reply

Your email address will not be published. Required fields are marked *