ನವದೆಹಲಿ: ಹೊಸವರ್ಷಕ್ಕೆ ಕಾಲಿಡಲು ಕೇವಲ 3 ದಿನಗಳಷ್ಟೇ ಬಾಕಿ ಉಳಿದಿವೆ. ಈ ಹೊತ್ತಲ್ಲೇ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು, ಜನವರಿಗೂ ಮೊದಲೇ ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್ಗೆ 10 ರೂ. ಕಡಿತಗೊಳಿಸುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ ಪೆಟ್ರೋಲಿಯಂ ಸಚಿವಾಲಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 8 ರೂ. ನಿಂದ 10 ರೂ.ವರೆಗೆ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಪ್ರಧಾನಿ ಮೋದಿಯ ಅನುಮೋದನೆ ಸಿಗಬೇಕಿದೆ. 2023-24ರ ಹಣಕಾಸು ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಕೇವಲ 2 ತಿಂಗಳು ಹೊರತುಪಡಿಸಿ ಪ್ರತಿ ಬ್ಯಾರೆಲ್ಗೆ ಸರಾಸರಿ 77.14 ಡಾಲರ್ (ಸುಮಾರು 6,415.71 ರೂ.) ಇತ್ತು. ಇನ್ನು ಸೆಪ್ಟೆಂಬರ್ನಲ್ಲಿ 93.54 ಡಾಲರ್ (7,779.69 ರೂ.) ಹಾಗೂ ಅಕ್ಟೋಬರ್ನಲ್ಲಿ 90.08 ಡಾಲರ್ನಷ್ಟು (7,491.92 ರೂ.) ಏರಿಕೆಯಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಸರಾಸರಿ ಕಚ್ಚಾತೈಲದ ಬೆಲೆ ಬ್ಯಾರೆಲ್ಗೆ 93.15 ಡಾಲರ್ (7,747.25 ರೂ.) ಆಗಿತ್ತು.