ವಿಜಯಪುರ, ನವೆಂಬರ್,4,2024 (www.justkannada.in): ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಕಿಡಿಕಾರಿರುವ ಸಚಿವ ಎಂ.ಬಿ ಪಾಟೀಲ್, ರೈತರಿಗೆ ಬಿಜೆಪಿಯವರೇ ನೋಟಿಸ್ ನೀಡಿದ್ದಾರೆ. ವಕ್ಫ್ ಆಸ್ತಿ ಎಂದು ನಮೂದು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ವಕ್ಫ್ ವಿಚಾರವಾಗಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಯಾರ ಜಮೀನನ್ನೂ ಪಡೆಯಲ್ಲ ಎಂದು ಸಿಎಂ ತಿಳಿಸಿದ್ದಾರೆ ಎಂದರು.
ಗ್ಯಾರಂಟಿ ಯೋಜನೆ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ನಮ್ಮ ಗ್ಯಾರಂಟಿಯನ್ನ ಅವರೇ ಕಾಪಿ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಮೈತ್ರಿ ಪಕ್ಷ ಗ್ಯಾರಂಟಿಯನ್ನ ಘೋಷಿಸಿದ್ದಾರೆ. ಮೋದಿ ಕಾ ಗ್ಯಾರಂಟಿ ಅಂತಾ ಅವರೇ ಹೇಳ್ತಾರೆ. 5 ವರ್ಷ ಗ್ಯಾರಂಟಿ ಮುಂದುವರೆಸುತ್ತೇವೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಗ್ಯಾರಂಟಿ ಘೋಷಣೆ ಮಾಡಿದ್ರೆ ಆರ್ಥಿಕತೆಗೆ ಹೊಡೆತ ಬೀಳಲ್ಲ. ನಾವು ಘೋಷಣೆ ಮಾಡಿದರೇ ಆರ್ಥಿಕ ಹೊಡೆತ ಬೀಳುತ್ತಂತೆ ಎಂದು ಲೇವಡಿ ಮಾಡಿದರು.
Key words: BJP, notice, Waqf property, Minister, MB Patil