ಬಿಜೆಪಿ ಸಭೆಯಿಂದ ಹೊರನಡೆದ ಕಾಗೇರಿ, ಅನಂತ್ ಕುಮಾರ್ ಹೆಗಡೆ

ಕಾರವಾರ: ಆರೋಗ್ಯದ ಕಾರಣ ನೀಡಿ ನಾಲ್ಕು ವರ್ಷ ಜನರ ಕೈಗೆ ಸಿಗದಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ.

ಆದರೆ ಸಂಸದರ ನಿರ್ಧಾರಕ್ಕೆ  ತಮ್ಮದೇ ಪಕ್ಷದಲ್ಲಿ ಸಪೋರ್ಟ್‌ ಸಿಗುತ್ತಿಲ್ಲ.   ಒದಕ್ಕೆ ಸಂಬಂಧಿಸಿದಂತೆ ಇದೀಗ ಅವರನ್ನು   ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆಯಿಂದ ಆದಷ್ಟು ಹೊರಗೆಯಿಟ್ಟಿದ್ದರು. ಇದರಿಂದ ಬೇಸಗೊಂಡ ಹೆಗಡೆ ಅವರು ಸ್ವತ ಸಭೆಯಿಂದ ಹೊರ ನಡೆದಿದ್ದಾರೆ.

ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನೇಮಕ ಮಾಡುವ ಸಭೆ ಜನವರಿ 23 ರಂದು ನಡೆದಿದ್ದು, ಈ ಸಭೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಉತ್ತರ ಕನ್ನಡ ಬಿಜೆಪಿ ಜಿಲ್ಲಾದ್ಯಕ್ಷ ಎನ್​ಎಸ್ ಹೆಗಡೆ ನಡುವೆ ಭಾರೀ ವಾಗ್ವಾದ ನಡೆದಿರುವುದು ಬಹಿರಂಗವಾಗಿದೆ.

ಜಿಲ್ಲಾದ್ಯಕ್ಷ ಎನ್​ಎಸ್ ಹೆಗಡೆ, ಮಾಜಿ ಸ್ಪಿಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆ ಗೌಪ್ಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಅನಂತ್​ ಕುಮಾರ್ ಹೆಗಡೆ ಸೂಚಿಸುವ ಹೆಸರಿಗೆ ಸ್ಪಿಕರ್ ಕಾಗೇರಿ ಒಲವು ವ್ಯಕ್ತಪಡಿಸದ ಹಿನ್ನೆಲೆ ರಾಜ್ಯ ಮಟ್ಟದ ನಾಯಕರಿಗೆ ಆಯ್ಕೆ ಜವಾಬ್ದಾರಿ ಕೊಡುವುದಕ್ಕೆ ತಿರ್ಮಾನಿಸಿ ಕಾಗೇರಿ ಅವರು ಸಭೆಯಿಂದ ಹೊರ ನಡೆದರು.

ಕಾಗೇರಿ ಸಭೆಯಿಂದ ಹೊರ ನಡೆದ ಬಳಿಕ ಲಿಸ್ಟ್ ಫೈನಲ್ ಮಾಡಿ ಎಂಬ ಅನಂತ್ ಕುಮಾರ್ ಹೆಗಡೆ ಸೂಚನೆಗೆ ಜಿಲ್ಲಾಧ್ಯಕ್ಷರು ತಲೆ ಕಡೆಸಿಕೊಂಡಿಲ್ಲ. ಕಾಗೇರಿ ಅವರು ಇರುವಾಗಲೇ ಹೇಳಬೇಕಿತ್ತು. ಅವರು ಹೊದ ಮೇಲೆ ಹಿಗೆಲ್ಲ ಮಾಡಿದರೆ ನನಗೆ ಕೆಟ್ಟ ಹೆಸರ ಬರುತ್ತದೆ. ನಾನು ಲಿಸ್ಟ್ ಮಾಡಲ್ಲ ಎಂದಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅನಂತ್ ಕುಮಾರ್ ಹೆಗಡೆ  ಸಭೆಯಿಂದ ಹೊರ ನಡೆದಿದ್ದಾರೆ.

ಈಗಾಗಲೇ ಅನಂತ್‌ ಕುಮಾರ್‌ ಹೆಗಡೆ ಅವರು ನೀಡುತ್ತಿರುವ ಹೇಳಿಕೆಗಳಿಂದ ಬಿಜೆಪಿ ಪಕ್ಷ ಇಕ್ಕಟಿಗೆ ಸಿಲುಕಿದೆ. ಹಾಗಾಗಿ ಬಿಜೆಪಿ ಪಕ್ಷ ಕೂಡ ಹೆಗಡೆ ಅವರಿಂದ ಅಂತರ ಕಾಯ್ದುಕೊಂಡಿದೆ.

 

 

Font Awesome Icons

Leave a Reply

Your email address will not be published. Required fields are marked *