ಚಾಮರಾಜನಗರ: ಮಕರ ಸಂಕ್ರಾಂತಿಯ ಮರುದಿನ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆಯಲಿರುವ ಚಿಕ್ಕ ಜಾತ್ರೆ ರಥೋತ್ಸವಕ್ಕೆ ಉತ್ಸವ ಮೂರ್ತಿಗೆ ಚಿನ್ನಾಭರಣಗಳನ್ನು ಖಜಾನೆಯಿಂದ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿರುವ ತಾಲ್ಲೂಕು ಕಛೇರಿಯಲ್ಲಿನ ಖಜಾನೆ ಯಲ್ಲಿ ಇರಿಸಲಾಗಿದ್ದ ಬಿಳಿಗಿರಿರಂಗನಾಥ ಸ್ವಾಮಿಯ ಉತ್ಸವ ಮೂರ್ತಿ ಹಾಗೂ ಗರ್ಭಗುಡಿ ಮೂರ್ತಿಯ ಆಭರಣಗಳನ್ನು ತಹಸೀಲ್ದಾರ್ ಜಯಪ್ರಕಾಶ್ ಸಮ್ಮುಖದಲ್ಲಿ ದೇವಾಲಯ ಅರ್ಚಕ ಸಿಬ್ಬಂದಿಗಳಿಗೆ ಹಸ್ತಾಂತರ ಮಾಡಲಾಯಿತು.
ನಾಳೆ ( ಮಂಗಳವಾರ) ಬಿಳಿಗಿರಿರಂಗನ ಬೆಟ್ಟ ದಲ್ಲಿ ಚಿಕ್ಕ ಜಾತ್ರೆ ಹಾಗೂ ರಥೋತ್ಸವ ನಡೆಯಲಿದ್ದು, ರಾಜ್ಯದ ವಿವಿದೆಡೆಗಳಿಂದ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಾಳೆ ಬಿಳಿಗಿರಿರಂಗನ ಬೆಟ್ಟಕ್ಕೆ ದ್ಚಿಚಕ್ರವಾಹನ ಸಂಚಾರ ನಿಷೇಧಿಸಿ ಆದೇಶಹೊರಡಿಸಿದೆ.