ಬಿಹಾರದ ಗಯಾದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ!

ಗಯಾ: ಇಬ್ಬರು ಪೈಲಟ್ಗಳನ್ನು ಹೊತ್ತ ಭಾರತೀಯ ಸೇನೆಯ ಅಧಿಕಾರಿಗಳ ಹೆಲಿಕಾಪ್ಟರ್ ಬಿಹಾರದ ಗಯಾದಲ್ಲಿ ಮಂಗಳವಾರ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

ಮಹಿಳೆ ಸೇರಿದಂತೆ ಪೈಲಟ್ ಗಳು ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಹೆಲಿಕಾಪ್ಟರ್ ಅಧಿಕಾರಿಗಳ ತರಬೇತಿ ಅಕಾಡೆಮಿಗೆ (ಒಟಿಎ) ಸೇರಿದ್ದು, ವಾಡಿಕೆಯ ತರಬೇತಿ ಯಲ್ಲಿತ್ತು ಎನ್ನಲಾಗಿದ್ದು. ಬೋಧ್ ಗಯಾ ಉಪವಿಭಾಗದ ಕಾಂಚನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇನ್ನು ಹೆಲಿಕಾಪ್ಟರ್ ಕೃಷಿ ಜಮೀನಿನಲ್ಲಿ ಅಪಘಾತಕ್ಕೀಡಾದಾಗ ಇಬ್ಬರು ಪೈಲಟ್ಗಳು ಒಳಗೆ ಇದ್ದರು. ಇಬ್ಬರು ಪೈಲಟ್ಗಳನ್ನು ರಕ್ಷಿಸಲು ಗ್ರಾಮಸ್ಥರು ಸಹಾಯ ಮಾಡಿದರು ಮತ್ತು ನಂತರ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *