ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಒಡಿಶಾ ರಾಜ್ಯದ ಪುರಿ, ಭುವನೇಶ್ವರ ಮತ್ತು ಕಟಕ್ ನಗರಗಳಿಗೆ ಬೆಂಗಳೂರಿನಿಂದ ಬಸ್ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಬಸ್ ಸೇವೆಗಳಿಗೆ ಇರುವ ಬೇಡಿಕೆ ಗಮನಿಸಿರುವ ನಿಗಮ, ಪ್ರಾಯೋಗಿಕವಾಗಿ ಬಸ್ ಸಂಚಾರ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಸ್ಲೀಪರ್ ಬಸ್‌ಗಳನ್ನು ಬಳಕೆ ಮಾಡಲಾಗುತ್ತದೆ.
ಸುಮಾರು 1,500 ಕಿ. ಮೀ. ಉದ್ದದ ಬಸ್ ಮಾರ್ಗ ಇದಾಗಿದ್ದು, ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಬಸ್‌ನಲ್ಲಿಯೇ 18 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಈ ಪ್ರಯೋಗ ಯಶಸ್ವಿಯಾದರೆ ಗುಜರಾತ್ ರಾಜ್ಯದ ಕೆಲವು ನಗರಗಳಿಗೆ ಸಹ ಬಸ್ ಸಂಪರ್ಕವನ್ನು ಕಲ್ಪಿಸಲು ಕೆಎಸ್ಆರ್‌ಟಿಸಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಸದ್ಯ ಕೆಎಸ್ಆರ್‌ಟಿಸಿ ಬೆಂಗಳೂರು-ಮುಂಬೈ, ಬೆಂಗಳೂರು-ಶಿರಡಿ ನಡುವೆ ಐಷಾರಾಮಿ ಬಸ್ ಸೇವೆ ಒದಗಿಸುತ್ತಿದೆ. ಈ ಮಾರ್ಗದ ಬಸ್‌ಗಳು ಸುಮಾರು 1000 ಕಿ. ಮೀ. ಸಂಚಾರ ನಡೆಸುತ್ತಿವೆ. ಆದರೆ ಒಡಿಶಾ ರಾಜ್ಯದ ಮೂರು ಪ್ರಮುಖ ನಗರಗಳು ಇದಕ್ಕಿಂತ ದೂರ ಇದೆ. ಆದರೆ ಈ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸುವಂತೆ ಬೇಡಿಕೆ ಹೆಚ್ಚಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳಲ್ಲಿ ಒಂದಾದ ಪುರಿಯ ಜಗನ್ನಾಥ ದೇವಾಲಯಕ್ಕೆ ಬಸ್ ಸೇವೆ ಆರಂಭಿಸುವಂತೆ ಕೆಎಸ್ಆರ್ಟಿಸಿಗೆ ಹೆಚ್ಚು ಒತ್ತಾಯ ಮತ್ತು ಮನವಿ ಕೇಳಿ ಬಂದಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದು ಕೆಎಸ್ಆರ್ಟಿಸಿಯ ಉದ್ದದ ಮಾರ್ಗವಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲು ಹೊಸ ಯುರೋಪಿಯನ್ ಶೈಲಿಯ, ಹವಾನಿಯಂತ್ರಿತ ಸ್ಲೀಪರ್ ಅಂಬಾರಿ ಉತ್ಸವ್ ಬಸ್‌ಗಳನ್ನು ನಿಯೋಜಿಸಲು ಯೋಜಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುಮಾರು 1,500 ಕಿ. ಮೀ. ಉದ್ದದ ಬಸ್ ಮಾರ್ಗ ಇದಾಗಿದ್ದು, ಐಷಾರಾಮಿ ಅಂಬಾರಿ ಉತ್ಸವ ಮಾದರಿಯ ಬಸ್‌ನಲ್ಲಿಯೇ 18 ಗಂಟೆಗಳ ಕಾಲ ಪ್ರಯಾಣ ಮಾಡಬೇಕಿದೆ. ಹೀಗಾಗಿ ಟಿಕೆಟ್ ದರ ಎಷ್ಟು ನಿಗದಿ ಮಾಡಬೇಕು? ಪ್ರಯಾಣಿಕರಿಗೆ ಏನೆಲ್ಲಾ ಸೌಲಭ್ಯ ಒದಗಿಸಬೇಕೆಂಬುವುದನ್ನು ನಿಗಮವು ಚಿಂತನೆ ನಡೆಸಿದೆ. ಎಲ್ಲಾ ಓಕೆ ಆದ ಬಳಿಕ ಟಿಕೆಟ್ ದರ ಸೇರಿದಂತೆ ಇನ್ನಿತರ ಮಾಹಿತಿಯನ್ನ ಹಂಚಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.