ಬೆಂಗಳೂರಿನ ಈ ರಸ್ತೆ ಒಂದು ವರ್ಷದ ವರೆಗೂ ಭಾಗಶಃ ಸಂಚಾರಕ್ಕೆ ಮುಚ್ಚಿರುತ್ತದೆ..! – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

 

ಬೆಂಗಳೂರು, .30, 2024 : (www.justkannada.in news)  ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬನ್ನೇರುಘಟ್ಟ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಒಂದು ಸಲಹೆಯನ್ನು ನೀಡಿದೆ. ಬೆಂಗಳೂರು ಮೆಟ್ರೋ ನಿರ್ಮಾಣದ ಪರಿಣಾಮವಾಗಿ, ಆನೆಪಾಳ್ಯ ಜಂಕ್ಷನ್‌ಗೆ MICO ಸಿಗ್ನಲ್‌ನ ಉದ್ದಕ್ಕೂ ಒಂದು ವರ್ಷದವರೆಗೆ ಭಾಗಶಃ ಸಂಚಾರ ಮುಚ್ಚಲಾಗುತ್ತದೆ.

ಈ ಸಂಬಂಧ BMRCL ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ,

 ‘ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ MICO ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ಗೆ ಉತ್ತರದ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಏಪ್ರಿಲ್ 1, 2024 ರಿಂದ ಒಂದು ವರ್ಷದವರೆಗೆ ರಸ್ತೆ ಬಂದ್‌ ಆಗಲಿದೆ. ದಕ್ಷಿಣ ಭಾಗದ ಪ್ರವೇಶದ ನಿರ್ಮಾಣದಿಂದಾಗಿ ಈ ರಸ್ತೆ ಬಂದ್‌ ಅನಿವಾರ್ಯವಾಗಿದೆ.

ಈ ಅವಧಿಯಲ್ಲಿ, ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಆನೆಪಾಳ್ಯ ಜಂಕ್ಷನ್‌ಗೆ ತಲುಪಲು ಉದ್ದೇಶಿಸಿರುವ ವಾಹನ ಚಾಲಕರನ್ನು MICO ಸಿಗ್ನಲ್‌ನಲ್ಲಿ ಬಲ ತಿರುವು ಪಡೆಯಲು ಮರುನಿರ್ದೇಶಿಸಲಾಗುತ್ತದೆ, BOSCH ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್‌ಗೆ ತೆರಳಿ ನಂತರ ಅವರು ಎಡ ತಿರುವು ಪಡೆಯಬೇಕು.

ಆದರೆ, ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ವೃತ್ತದ ಕಡೆಗೆ ಸಂಚಾರಕ್ಕೆ ಯಾವುದೇ ವ್ಯತ್ಯಯ ಇರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಹೋಗುವವರು ವಿಲ್ಸನ್ ಗಾರ್ಡನ್‌ನ 7ನೇ ಮುಖ್ಯರಸ್ತೆಯಲ್ಲಿ ಎಡಕ್ಕೆ ತಿರುಗುವಂತೆ ಸೂಚಿಸಲಾಗಿದೆ.

ಲಕ್ಕಸಂದ್ರ ಅಂಡರ್‌ ಗ್ರೌಂಡ್‌  ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ರಚನೆಯಲ್ಲಿ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿರುವಾಗ ಟ್ರಾಫಿಕ್ ಹರಿವನ್ನು ಸುಗಮಗೊಳಿಸಲು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಈ ಮುಂಜಾಗ್ರತ ಕ್ರಮ ಜರುಗಿಸಲಾಗಿದೆ.

ಪ್ರಯಾಣಿಕರು ಈ ಬದಲಾವಣೆ ಗಮನಿಸಿ, ಅನಾನುಕೂಲತೆಯಿಂದ ಪಾರಾಗಲು ಸೂಚಿಸಿರುವ  ಮಾರ್ಗಗಳನ್ನುಅನುಸರಿಸುವಂತೆ ಬಿಎಂಆರ್ಸಿಎಲ್‌  ಕೋರಿದೆ.

key words :  BMRCL,  traffic alert,  Bannerghatta main road, remain partially closed,  for 1 year

English summary : 

Bengaluru Metro Rail Corporation Limited (BMRCL) has issued an advisory for the commuters travelling along Bannerghatta Road. As a result of the construction of the Bengaluru Metro, there will be a partial closure along the MICO signal to the Anepalya junction for a year.

The BMRCL has issued a press note saying, ‘Commuters traversing the northbound lane on Bannerghatta Main Road from MICO Signal to Anepalya Junction will face a one-year closure starting April 1, 2024. This closure is due to the construction of the south side entry structure at Lakkasandra Underground Metro Station.’

 

website developers in mysore

Font Awesome Icons

Leave a Reply

Your email address will not be published. Required fields are marked *