ಬೆಂಗಳೂರು: ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ವೈದ್ಯೆಯೊಬ್ಬರಿಗೆ ವೈದ್ಯರೊಬ್ಬರು ಕಿರುಕುಳ ನೀಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್) ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ವೈದ್ಯೆಗೆ ಅದೇ ವಿಭಾಗದಲ್ಲಿ ಕೆಲಸ ಮಾಡ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಫಾಲೋ ಮಾಡ್ತಾನೆ, ಮೈ, ಕೈ ಮುಟ್ತಾನೆ ಅಂತಾ ಬನಶಂಕರಿ ಠಾಣೆಗೆ ಕಿಮ್ಸ್ ವೈದ್ಯೆ ದೂರು ನೀಡಿದ್ದಾರೆ. ಅರೋಪ ಸಾಬೀತಾದರೆ ಅರೆಸ್ಟ್ ಮಾಡಿಸಾಧ್ಯತೆ ಇದೆ.
ಕಾಲೇಜಿನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಬರ್ತಿದ್ದಾರೆ. ನನ್ನನ್ನ ಫಾಲೋ ಮಾಡಿ ಲೈಂಗಿಕ ಕಿರುಕುಳ ನೀಡ್ತಾನೆ ಅಂತಾ ಆರೋಪಿಸಿ ವೈದ್ಯೆ ಡಾ. ರಾಜು ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.