ಬೆಂಡೆಕಾಯಿ ಕುರುಕುರೆ ನೀವು ಯಾವತ್ತಾದರೂ ಟ್ರೈ ಮಾಡಿದ್ದೀರಾ?

ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಬೇಕೇ ಬೇಕು. ಸಿಂಪಲ್ ಆಗಿ ಬೆಂಡೆಕಾಯಿ ಕುರುಕುರೆ ಟ್ರೈ ಮಾಡಬಹುದು.  ಊಟದೊಂದಿಗೆ ಇದನ್ನು ನೀವು ಸೈಡ್ ಡಿಶ್ ಆಗಿಯೂ ಬಳಸಬಹುದು.

ಬೇಕಾಗುವ ಪದಾರ್ಥಗಳು:
ಬೆಂಡೆಕಾಯಿ – 200 ಗ್ರಾಂ
ಕಡಲೆ ಹಿಟ್ಟು – 2 ಟೀಸ್ಪೂನ್
ಅಕ್ಕಿ ಹಿಟ್ಟು – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
ಆಮ್ಚೂರ್ ಪುಡಿ – ಕಾಲು ಟೀಸ್ಪೂನ್
ಚಾಟ್ ಮಸಾಲಾ – 1 ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾಗುವಷ್ಟು

ಮಾಡುವ ವಿಧಾನ: ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಶುಭ್ರ, ಒಣ ಬಟ್ಟೆಯಿಂದ ಒರೆಸಿಕೊಂಡು,
ಅಂಚುಗಳನ್ನು ಕತ್ತರಿಸಿ, ತೆಳ್ಳಗಿನ ಹಾಗೂ ಉದ್ದವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ.

ಒಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕೆಂಪು ಮೆಣಸಿನಪುಡಿ, ಆಮ್ಚೂರ್‌ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯಿಗಳನ್ನು ಕುರುಕಲಾಗುವಂತೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ, ಅದರ ಮೇಲೆ ಚಾಟ್ ಮಸಾಲಾವನ್ನು ಉದುರಿಸಿದರೆ ರುಚಿರುಚಿಯಾದ ಬೆಂಡೆಕಾಯಿ ಕುರುಕುರೆ ಸವಿಯಲು ಸಿದ್ದ.

Font Awesome Icons

Leave a Reply

Your email address will not be published. Required fields are marked *