ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ರಜತ ಸಂಭ್ರಮ ಆಚರಣೆ

ಮಂಗಳೂರು: ಕಾರ್ಗಿಲ್ ಸಮರ ವಿಜಯದ ರಜತ ಸಂಭ್ರಮವನ್ನು ಪ್ರತಿಷ್ಠಾನದ ವತಿಯಿಂದ ಉಳ್ಳಾಲ ವೀರರಾಣಿ ಅಬ್ಬಕ್ಕಳ ವ್ರತ್ತದ ಬಳಿ ಪ್ರತಿಮೆಗೆ ಹಾರ ಹಾಕಿ ಪುಷ್ಪಾರ್ಚನೆಗೈದು ನಡೆಸಲಾಯಿತು.

Ad

300x250 2

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ, ದೇಶದ ಜನರು ಇಂದು ನಿರ್ಭೀತಿಯಿಂದ ನೆಮ್ಮದಿಯಿಂದ ಇರುವುದು ಗಡಿಯಲ್ಲಿ ತನ್ನ ಜೀವದ ಹಂಗು ತೊರೆದು ದೇಶ ಕಾಯುವ ಭಾರತೀಯ ಸೇನೆಯಿಂದ, ಕಾರ್ಗಿಲ್ ಯುದ್ಧದ ವಿಜಯ ಸೇನೆಯ ಶೌರ್ಯ ವನ್ನು ಜಗತ್ತಿಗೆ ಪಸರಿಸಿದ ಅಮೃತ ದಿನ ಎಂದು ಅವರು ಹೇಳಿದರು.
ಮಾಜಿ ಸೇನಾನಿ ಸಂದೀಪ್ ಶೆಟ್ಟಿ, ಕೊಲ್ಯ ಇವರನ್ನು ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಅವರು ಮಾತನಾಡುತ್ತಾ ಈ ಸಮ್ಮಾನ ಸಮಸ್ತ ಸೈನಿಕ ಸಹೋದರರಿಗೆ ಸಮರ್ಪಣೆ, ರಾಷ್ಟ್ರರಕ್ಷಣೆ ಮಾಡುವ ಯೋಧನಿಗೆ ನೀಡಿದ ಗೌರವಕ್ಕೆ ಚಿರ ಋಣಿಯಾಗಿದ್ದೇನೆ ಎಂದರು.

ಈ ಸಂಧರ್ಭದಲ್ಲಿ ಶೀರೂರು ಗುಡ್ಡಕುಸಿತದಲ್ಲಿ ಮಡಿದ ಮೃತದೇಹ ವನ್ನು ತಮ್ಮ ಕಾರ್ಯ ವನ್ನು ಬದಿಗಿರಿಸಿ ಮಳೆಯನ್ನು ಲೆಕ್ಕಿಸದೆ ಸಾಗಿಸಲು ಸಹಕರಿಸಿರದ ಪತ್ರಕರ್ತರಾದ ಮೋಹನ್ ಕುತ್ತಾರು, ಶಿವರಾಜ್, ಆರಿಫ್ ಕಲ್ಕಟ್ಟ, ಶಶಿ ಬೆಳ್ಳಯ್ಯೂರು ಮತ್ತು ಗಿರೀಶ್ ಮಳಲಿ ಇವರನ್ನು ಅಭಿನಂದಿಸಲಾಯಿತು.

ರಾಜ್ಯ ಬಿ.ಜೆ.ಪಿ. ಮೀನುಗಾರರ ಪ್ರಕೋಷ್ಠದ ಸಹ ಸಂಚಾಲಕರಾದ ಯಶವಂತ ಅಮೀನ್, ರಾಜ್ಯ ಬಿ.ಜೆ.ಪಿ. ಪ್ರಕೋಷ್ಠಗಳ ಸದಸ್ಯರಾದ ಶ್ರೀಮತಿ ಧನಲಕ್ಷ್ಮೀ ಗಟ್ಟಿ, ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟು, ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಮಾಧವಿ ಉಳ್ಳಾಲ, ಪ್ರತಿಷ್ಠಾನದ ಗೌರವಾಧ್ಯಕ್ಷರಾದ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಮಾಧವ ಉಳ್ಳಾಲ, ಗೋಪಿನಾಥ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಗಿಲ್ ವಿಜಯೋತ್ಸವದ ಸಂಚಾಲಕರಾದ ದೀಕ್ಷಿತ್ ನಿಸರ್ಗ, ವೃಕ್ಷಾಂಕುರ ರಕ್ಷಾ ಸಂಚಾಲಕರು ಪ್ರಸಾದ್ ಕೊಂಡಾಣ, ಗೂಡುದೀಪ ಸಂಚಾಲಕರಾದ ದಾಮೋದರ ನಡಾರ್, ಗುರುವಂದನೆ ಸಂಚಾಲಕರಾದ ರಾಜೇಂದ್ರ ಸೇವಂತಿಗುಡ್ಡೆ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೊತೊಡು, ಪ್ರಮುಖರಾದ ಮೋಹನ್ ಸಾಲ್ಯಾನ್, ಸುಧಾಕರ್ ಬಜಾಲ್, ನವೀನ್ ಎ.ಕೆ., ರಮೇಶ್ ಸಾಮಾನಿ, ಶರತ್ ಭಂಡಾರಿ, ರಾಧಾಕಾಂತ್ ಪಡಿಯಾರ್, ಚಂದ್ರಶೇಖರ ಕೊಲ್ಯ, ಸಂಪತ್ ಕುಕ್ಯಾನ್ ಭಂಡಾರಮನೆ, ರಾಜೇಶ್ ಉಳ್ಳಾಲ ಬೈಲ್, ನಟರಾಜ್ ತೊಕ್ಕೊಟು ಇತರರು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಕಿರಣ್ ಕೊಲ್ಯ ವಂದಿಸಿದರು.

Font Awesome Icons

Leave a Reply

Your email address will not be published. Required fields are marked *