ಹೊಸದಿಲ್ಲಿ: ಮುಂಬಯಿ ದಾಳಿಯ 31ನೇ ವರ್ಷದ ಕರಾಳ ದಿನದಂದೇ ಭಾರತದ ಆರ್ಥಿಕತೆಯನ್ನು ಗುರಿಯಾಗಿಸಲು ತನ್ನ ಬೆಂಬಲಿಗರಿಗೆ ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಕರೆ ನೀಡಿದ್ದಾನೆ.
ಮುಂಬಯಿ ಷೇರು ಪೇಟೆ (ಬಿಎಸ್‌ಇ) ಮತ್ತು ಭಾರತೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ಗಳನ್ನು ಗುರಿಯಾಗಿಸಿ ಎಂದಿದ್ದಾನೆ. ಭಾರತೀಯ ಗುಪ್ತಚರ ಸಂಸ್ಥೆಯ ವರದಿಗಳ ಪ್ರಕಾರ, ಇದೇ ಮಾರ್ಚ್ 12ಕ್ಕೆ ಮುಂಬಯಿ ಸರಣಿ ದಾಳಿ ನಡೆದು 31 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಸರಣಿ ದಾಳಿ ನಡೆಸಿ ಕಟ್ಟಡಗಳನ್ನು ಧ್ವಂಸಗೊಳಿಸುವ ಬದಲು ಆರ್ಥಿಕತೆಯನ್ನೇ ಬುಡಮೇಲು ಮಾಡಲು ಪನ್ನು ಯೋಜಿಸಿದ್ದಾನೆ. ಇದರ ಭಾಗವಾಗಿ ಮಾ.12ಕ್ಕೂ ಮುಂಚೆ ಯೇ ಭಾರತೀಯ ಷೇರುಗಳನ್ನು ಮಾರಾಟ ಮಾಡಿ, ಅಮೆರಿಕದ ಷೇರುಗಳನ್ನು ಖರೀದಿಸುವಂತೆ ಕರೆ ನೀಡಿದ್ದಾನೆ ಎಂದು ಮಾಹಿತಿ ಲಭಿಸಿದೆ.