ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಹೊಂದಿರುವ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಬಾಹ್ಯಾಕಾಶದ ಬಗ್ಗೆ ಅಪಾರ ಜ್ಞಾನ ಹೊಂದಿದ ಹಾಗೂ ಬಾಹ್ಯಾಕಾಶ ಕುರಿತು ಸಾಕಷ್ಟು ಕುತೂಹಲ ಇರುವಂತ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು.
ಇಸ್ರೋ ಅಡಿ ಬರುವಂತ ವುಮೆನ್ ಸ್ಪೆಸ್ ಫ್ಲೈಟ್ ಸೆಂಟ್ರ (ಹೆಚ್ಎಫ್ಎಸ್ಸಿ)ನಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೆಡಿಕಲ್ ಆಫೀಸರ್, ಸೈಂಟಿಸ್ಟ್/ ಇಂಜಿನಿಯರ್, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಟಿಕ್ನಿಷಿಯನ್-ಬಿ, ಡ್ರಾಟ್ಸ್ಮ್ಯಾನ್-ಬಿ ಹಾಗೂ ಅಸಿಸ್ಟೆಂಟ್ ರಾಜಭಾಷಾ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು. ಇಸ್ರೋದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನಂತರ ಅಪ್ಲೇ ಮಾಡಬೇಕು. ಎಷ್ಟು ಹುದ್ದೆಗಳು ಹಾಗೂ ಆ ಹುದ್ದೆಗಳ ಹೆಸರು: ಮೆಡಿಕಲ್ ಆಫೀಸರ್- 3, ಸೈಂಟಿಸ್ಟ್/ ಇಂಜಿನಿಯರ್- 10, ಟೆಕ್ನಿಕಲ್ ಅಸಿಸ್ಟೆಂಟ್- 28, ಸೈಂಟಿಫಿಕ್ ಅಸಿಸ್ಟೆಂಟ್- 01, ಟಿಕ್ನಿಷಿಯನ್-ಬಿ- 43, ಡ್ರಾಟ್ಸ್ಮ್ಯಾನ್-ಬಿ- 13, ಅಸಿಸ್ಟೆಂಟ್ ರಾಜಭಾಷಾ- 01, ಒಟ್ಟು ಪೋಸ್ಟ್ಗಳು- 99.
ವಯೋಮಿತಿ; ಸೈಂಟಿಸ್ಟ್/ಇಂಜಿನಿಯರ್- 18 ರಿಂದ 30 ವರ್ಷಗಳು, ಅಸಿಸ್ಟೆಂಟ್ ರಾಜಭಾಷಾ- 18 ರಿಂದ 28 ವರ್ಷಗಳು, ಉಳಿದಂತ ಎಲ್ಲ ಹುದ್ದೆಗೆ- 18 ರಿಂದ 35 ವರ್ಷಗಳು, ವಿದ್ಯಾರ್ಹತೆ: ಟಿಕ್ನಿಷಿಯನ್-ಬಿ, ಡ್ರಾಟ್ಸ್ಮ್ಯಾನ್-ಬಿ= ಐಟಿಐ ಸಂಬಂಧಿತ ಕೋರ್ಸ್, ಟಿಕ್ನಿಷಿಯನ್ ಅಸಿಸ್ಟೆಂಟ್= ಡಿಪ್ಲೋಮಾ ಇನ್ ಇಂಜಿನಿಯರಿಂಗ್ (ಶೇ.60 ಅಂಕಗಳು), ಸೈಂಟಿಸ್ಟ್/ ಇಂಜಿನಿಯರ್= ಎಂಇ/ಎಂಟೆಕ್, ಬಿಇ/ಬಿಟೆಕ್, ಅಸಿಸ್ಟೆಂಟ್ ರಾಜಭಾಷಾ= ಪದವಿ (ಶೇ.60 ಅಂಕಗಳು), ಮೆಡಿಕಲ್ ಆಫೀಸರ್- ಎಂಬಿಬಿಎಸ್, ಎಂಡಿ, ಸೈಂಟಿಫಿಕ್ ಅಸಿಸ್ಟೆಂಟ್- ಬಿಎಸ್ಸಿ (ಶೇ.60 ಅಂಕಗಳು),
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಮೆಡಿಕಲ್ ಪರೀಕ್ಷೆ, ದಾಖಲಾತಿ ಪರಿಶೀಲನೆ, ಸಂಬಳ- ಹೆಚ್ಎಫ್ಎಸ್ಸಿ ನಿಯಮದಂತೆ ನಿಗದಿ ಮಾಡಲಾಗುತ್ತದೆ. ಅಪ್ಲೇ ಮಾಡಲು ಪ್ರಾರಂಭದ ದಿನಾಂಕ- 2024ರ ಸೆಪ್ಟೆಂಬರ್ 19. ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 2024ರ ಅಕ್ಟೋಬರ್ 09.